ಸೋಮವಾರ, ಫೆಬ್ರವರಿ 28, 2022

ಭಾರತೀಸುತ ಮತ್ತು ಕನ್ನಡದ್ದೇ ಒರೆಗಳು

ಭಾರತೀಸುತ ಅವರ ಹೆಸರು ಶಾನಭಾಗ ರಾಮಯ್ಯ ನಾರಾಯಣರಾವ್. ಕನ್ನಡ ನಲ್ಬರಹಕ್ಕೆ ಇವರ ಕೊಡುಗೆ ತುಂಬಾ ದೊಡ್ಡದು. ಇವರು ಹಲವು ಹೆರ‍್ಕತೆಗಳನ್ನು ಬರೆದಿದ್ದಾರೆ. ಇವರ ಕೆಲವು ಹೆರ‍್ಕತೆಗಳು ಓಡುತಿಟ್ಟವಾಗಿ ಬಂದಿವೆ, ಎತ್ತುಗೆಗಳು :- ಬಯಲುದಾರಿ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ. 

ಭಾರತೀಸುತ ಅವರ ಹಲವು ಬರಹಗಳು ನೋಡಿದರೆ ಅದರಲ್ಲಿ ಹಲವು ಕನ್ನಡದ್ದೇ ಒರೆಗಳು ಬಳಸಿದ್ದಾರೆ. ನಮ್ಮ ಹಿರಿಯರು ಬಳಸಿರುವ ಕನ್ನಡದ್ದೇ ಒರೆಗಳನ್ನು ಗಮನಿಸೋಣ. ಕನ್ನಡದ್ದೇ ಒರೆಗಳ ಸುತ್ತಲೂ ಕೀಳರಿಮೆ ಜೊತೆ ತಿಳಿವಳಿಕೆ ಕೊರತೆ ಹಲವು ಕಡೆ ಕಾಣುತ್ತದೆ.

ಭಾರತೀಸುತ ಅವರ "ಬೆಳ್ಳಿ ಮೂಡಿತು" ಒಂದು ಒಳ್ಳೆ ಹೊತ್ತಗೆಯೆಂದು ಹೇಳಬಹುದು. ಕೊಡಗನ್ನು ನಮ್ಮ ಕಣ್ಣು ಮುಂದೆ ತರುವ ಈ ಹೊತ್ತಗೆ ಹೊದಿಕೆತಿಟ್ಟ ಇಲ್ಲಿದೆ :-


ಈ ಹೊತ್ತಗೆಯಲ್ಲಿರುವ ಕೆಲವು ಸೊಲ್ಲುಗಳು ಇಲ್ಲಿ ಹಾಕಲಾಗಿದೆ, ತಿಟ್ಟ ಇಲ್ಲಿದೆ :- 


ಈ ಸೊಲ್ಲುಗಳಲ್ಲಿ ಈ ಕೆಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ :- "ಕಯ್ದು" (ಶಸ್ತ್ರ), "ದಣಿ" (ಆಯಾಸಪಡು), "ಗೆಯ್ತ" (ಕಾರ್ಯ), "ಕಡು", "ಬಾಳು". ಹೀಗೆ ನಮ್ಮ ಹಿರಿಯರು ಕೂಡ ಹಲವು ಕನ್ನಡದ್ದೇ ಒರೆ ಬಳಸಿದ್ದರು. ಕನ್ನಡದ್ದೇ ಒರೆಯಿಲ್ಲ ಎಂದು ಹೇಳುವ ಮುನ್ನ ಹಿರಿಯರ ಕನ್ನಡದ್ದೇ ಒರೆಬಳಕೆ ನೆನಪಿರಲಿ. 

ಭಾರತೀಸುತ ಅವರ ಇನ್ನೊಂದು ಹೊತ್ತಗೆ "ಬೆಂಕಿಯ ಮಳೆ". ಹೊದಿಕೆತಿಟ್ಟ ಇಲ್ಲಿದೆ :- 


ಅದರಲ್ಲಿ ಈ ಕೆಲವು ಸೊಲ್ಲುಗಳನ್ನು ಗಮನಿಸಿ, ಅದರಲ್ಲಿ "ತುಬ್ಬು" ಒರೆ ಬಳಕೆಯಾಗಿದೆ. 


ತುಬ್ಬು ಅಂದರೆ ಪತ್ತೆ ಮಾಡು, ಆದರೆ ಈ ಒರೆಯನ್ನು ನಾವು ಬಳಸುವುದಿಲ್ಲ. ಕನ್ನಡದ್ದೇ ಒರೆಯಾದ "ತುಬ್ಬು" ಮತ್ತೆ ಬಳಕೆಗೆ ಬರಲಿ, ಹೀಗೆ ಎಲ್ಲ ಬಗೆಯ ಬರಹಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸೋಣ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ