ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 3, 2025

ಕನ್ನಡ ಒಳನುಡಿಗಳ ಕೆಲವು ಹೊತ್ತಗೆಗಳು

ಊರಿಂದ ಊರಿಗೆ ಯಾವುದೇ ನುಡಿಯಾಗಲಿ ಆಯ ಊರುಗಳಲ್ಲಿ ಆ ನುಡಿಯನ್ನು ಮಾತನಾಡುವ ಮಂದಿ ಮಾತು ಕೇಳಿದರೆ ಕೆಲವು ಬೇರ‍್ಮೆಗಳು ಕಾಣುತ್ತವೆ. ಇದು ಹೆಚ್ಚುಕಡಿಮೆ ಎಲ್ಲ ನುಡಿಗಳಿಗು ಒಪ್ಪುವ ಮಾತು. ಕರ್ನಾಟಕದಲ್ಲಿ ಮೂವತ್ತೊಂದು ಕಂಪಣಯಿವೆ ಮತ್ತು ಊರಿಂದ ಊರಿಗೆ ಹೋದ ಹಾಗೆ ಆಯ ಊರಿನ ಕನ್ನಡ ಗಮನಿಸಿದರೆ ಬೇರ‍್ಮೆಗಳಿವೆ. ಈ ಹಲವು ಊರುಗಳಲ್ಲಿ ಮಾತನಾಡುವ ಕನ್ನಡ ನಡುವೆಯಿರುವ ಬೇರ‍್ಮೆಗಳು ಯಾವು ? ಹೋಲಿಕೆಗಳು ಯಾವು ? ಕನ್ನಡ ಒಳನುಡಿಗಳ ಸಲುವಾಗಿ ಹಿಂದೆಯೇ ಡೆಕ್ಕನ್ ಕಾಲೇಜ್ ಅವರು ಹಲವು ಹೊತ್ತಗೆಗಳನ್ನು ಹೊರತಂದಿದ್ದರು. ಹೊತ್ತಗೆಗಳ ಪಟ್ಟಿ ಹಾಗು ತಿಟ್ಟ ಇಲ್ಲಿದೆ (https://www.dcpune.ac.in/Publications.html ಕೊಂಡಿಯಲ್ಲು ಹೊತ್ತಗೆ ಪಟ್ಟಿಯಿದೆ) :- 

೧. ಗುಲ್ಬರ‍್ಗ ಕನ್ನಡ 









೨. ತಿಪಟೂರು ಕನ್ನಡ









೩. ಹಾಲಕ್ಕಿ ಕನ್ನಡ









೪. ಹವ್ಯಕ ಕನ್ನಡ 









೫. ಬಾರ್ಕೂರು ಕನ್ನಡ









೬. ನಂಜನಗೂಡ ಕನ್ನಡ









೭. ರಬಕವಿ ಕನ್ನಡ 









೮. ಕೂರ್ಗ್ ಕನ್ನಡ







ಶುಕ್ರವಾರ, ಆಗಸ್ಟ್ 11, 2023

ಅಂತಿಗೊನೆ - ಕನ್ನಡದ್ದೇ ಒರೆಗಳ ಕಣಜ

ಸೊಪೊಕ್ಲೇಸ್ ಅವರ ಗ್ರೀಕ್ ಆಡುಗಬ್ಬ "ಅಂತಿಗೊನೆ"ಯನ್ನು ಕನ್ನಡಿಸಿದ್ದು ಕ.ವೆಂ.ರಾಘವಾಚಾರ್ ಅವರು. ಇದು ೧೯೫೬ ಏಡಿನಲ್ಲಿ ಬಿಡುಗಡೆಯಾಯಿತು. ಹೊತ್ತಗೆಯ ಹೆಚ್ಚಿನ ಕುರಿಪು ಈ ಕೆಳಗಿನ ತಿಟ್ಟದಲ್ಲಿದೆ. 



ಈ ಓದುಗೆಯ ಮುನ್ನುಡಿ ನೋಡಿದರೆ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ, ಎತ್ತುಗೆ :- ಅರಿಕೆ, ಕಾಣಿಕೆಯೊಪ್ಪಿಕೆ, ಕಡೆನೆನಪು. ಮುನ್ನುಡಿ ಓದುವಾಗ ತಿಳಿಯುತ್ತದೆ ಕನ್ನಡಿಸುವಾಗ ಇದನ್ನು ಹಳೆಗನ್ನಡದಲ್ಲಿ ಕನ್ನಡಿಸಿದ್ದಾರೆ ಎಂದು. ಇದನ್ನು ಓದುವಾಗ ಹಳೆಗನ್ನಡದ ಹಲವು ಕನ್ನಡದ್ದೇ ಒರೆಗಳು ನಮ್ಮ ಗಮನ ಸೆಳೆಯುತ್ತದೆ, ಅದರಲ್ಲಿ ಒಂದು "ಕೋಯಿಲ್(ಲು)", ಹಿಂದೆ ಕೆಲವು ಕನ್ನಡ ಕಲ್ಬರಹಗಳಲ್ಲಿ ಈ ಒರೆ ಬಳಕೆಯಾಗಿದೆ, ಇದರ ಹುರುಳು ಗುಡಿ ಇಲ್ಲ ದೇವಸ್ಥಾನ. ಹೊತ್ತಗೆಯಲ್ಲಿ ಈ ಒರೆ ಬಳಕೆಯಾಗಿರುವ ಹಾಳೆಬದಿಯ ತಿಟ್ಟ ಇಲ್ಲಿದೆ :- 


ಹೀಗೆ ಈ ಹೊತ್ತಗೆ ನೋಡಿದರೆ ಹಲವು ಹಲವು ಕನ್ನಡದ್ದೇ ಒರೆಗಳು ದೊರೆಯುತ್ತವೆ ಮತ್ತು ಹೊತ್ತಗೆ ಕೊನೆಯಲ್ಲಿ ಒರೆಪಟ್ಟಿ ಕೂಡ ನೀಡಲಾಗಿದೆ. ಇಲ್ಲು ಕೂಡ ಹಲವು ಕನ್ನಡದ್ದೇ ಒರೆಗಳು ಸಿಗುತ್ತವೆ, ಕೆಲವು ಎತ್ತುಗೆಗಳು :-

ಅಱಂ (ಧರ್ಮ)
ಉಸಿರಿ (ಪ್ರಾಣಿ) 
ಎಣೆ (ಸಮ) 
ಎಸಕಂ (ಕೆಲಸ)
ಒಣರ್ (ಭಾವಿಸು)
ಕಾಣ್ಕೆ (ದರ್ಶನ)
ನೀರುಸಿರಿ (ನೀರು ಪ್ರಾಣಿ) 
ಪೂಣ್ (ಪ್ರತಿಜ್ಞೆಮಾಡಿ (ಕೈಗೊಳ್ಳು))
ಪೊೞ್ತು(ಳ್ತು) (ಹೊತ್ತು, ನೇಸರು)
ಬೇಳ್‍ಕಟ್ಟೆ (ಹೋಮಕುಂಡ) 
ಮಸಗು (ಕೆರಳು, ಉಕ್ಕು) 
ಮಾಱಾ(ರಾ)ಡು (ಅದಲು ಬದಲು ಮಾಡು)

ಈ ಹೊತ್ತಗೆಯನ್ನು ಇಲ್ಲಿಂದ ಇಳಿಸಿಕೊಳ್ಳಬಹುದು :- https://archive.org/details/anthigone0000soph  

ಬುಧವಾರ, ಅಕ್ಟೋಬರ್ 26, 2022

ಮಿಂಬಲೆಯಲ್ಲಿ ಕೆಲವು ಕನ್ನಡ ಪದನೆರಕೆಗಳು

ಈಗಾಗಲೇ ಮಿಂಬಲೆ ನಮ್ಮ ಬದುಕಿನಲ್ಲಿ ಒಂದು ದೊಡ್ಡ ಪಾಂಗಾಗಿ ಬೆಳೆದಿದೆ. ಮಿಂಬಲೆಯಲ್ಲಿ ತುಂಬಾ ತಿಳಿವು ಸಿಗುವುದು ಸರಿ, ಈಗ ಹಲವು ಕನ್ನಡ ಪದನೆರಕೆಗಳು ಕೂಡ ಇಲ್ಲಿವೆ, ಈ ಬರಹದಲ್ಲಿ ಕೆಲವು ತಿಳಿಸಲಾಗಿದೆ. 

೧. ತಿಳಿಪದ (ಅರಿಮೆ ಮತ್ತು ಚಳಕದರಿಮೆ ಪದನೆರಕೆ) :- https://tilipada.org

೨. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ ಇಂಗ್ಲಿಷ್ ನಿಘಂಟು (೪ ಸಂಪುಟಗಳು)" :-  https://dsal.uchicago.edu/dictionaries/kittel/

೩. ವಿ.ಕ್ರುಶ್ಣ ಅವರ ಅಲರ್ "Kannada → English dictionary" :- https://alar.ink

೪. ಬರಹ ನಿಗಂಟು :-  https://baraha.com/kannada/browse.php (ಕೊಂಡಿಯಲ್ಲಿ ಹಲವು ಪದನೆರಕೆ/ಗುಂಪಿನ ಕೆಲಸಗಳಿವೆ, ಎತ್ತುಗೆ "ಪದ ಪದ ಕನ್ನಡ ಪದಾನೇ" ಗುಂಪು)

೫. ವಿಕ್ಶನರಿ :-  https://kn.wiktionary.org 

೬. ಪದಕಣಜ (ಕರ್ನಾಟಕ ಆಳ್ವಿಕೆ ತಾಣ) :- https://padakanaja.karnataka.gov.in/ 

ಶನಿವಾರ, ಜೂನ್ 18, 2022

ಪದವಿನ್ಯಾಸ - ಕನ್ನಡ ಹಲತನ ಸಾರುವ ಹೊತ್ತಗೆ

ಕರ್ನಾಟಕದ ನುಡಿ ಕನ್ನಡವನ್ನೇ ತೆಗೆದುಕೊಂಡರೆ ಅದರೊಳಗೆ ಹಲವು ಕನ್ನಡಗಳಿವೆ. ಒಂದು ಊರಿನಿಂದ ಇನ್ನೊಂದು ಊರಿನ ಕನ್ನಡದಲ್ಲಿ ಹಲವು ಬೇರ‍್ಮೆಗಳನ್ನು ನಾವು ಕಾಣಬಹುದು. ಕನ್ನಡದಲ್ಲಿ ಹಲವು ಊರುಗಳಲ್ಲಿ ಹಲವು ಬಗೆಗಳಲ್ಲಿ ಕನ್ನಡವು ಬಳಕೆಯಾಗುತ್ತಿದೆ. ಕನ್ನಡದಲ್ಲಿ ಹಲವು ಒಳನುಡಿಗಳಿವೆ ಎಂದು ಹೇಳಬಹುದು. 

ಈ ಹಲವು ಒಳನುಡಿಗಳನ್ನು ಗಮನದಲ್ಲಿಟ್ಟಿಕೊಂಡು ಒಂದೇ ಪದದ ಹಲವು ಬಗೆಗಳ ಜೊತೆ ಅದೇ ಪದಕ್ಕೆ ಬೇರೆ ಊರುಗಳಲ್ಲಿ ಸಾಟಿಯಾದ ಪದಬಳಕೆ ಕುರಿತು ಬರೆದಿರುವ ಹೊತ್ತಗೆ "ಪದವಿನ್ಯಾಸ". ಇದನ್ನು ಬರೆದವರು ಡಾ || ಅಶೋಕಕುಮಾರ ರಂಜೇರೆ. ಒಕ್ಕಲುತನವನ್ನು ಗಮನದಲ್ಲಿಟ್ಟಿಕೊಂಡು ಹದಿನಯ್ದು ಪದಗಳು, ಅವುಗಳ ಹಲವು ಬಗೆಗಳು ಮತ್ತು ಸಾಟಿ ಪದಗಳ ಪಟ್ಟಿ ಇದೇ ಹೊತ್ತಗೆಯಲ್ಲಿ ನೀಡಲಾಗಿದೆ.  ಹೊತ್ತಗೆ ಹೊದಿಕೆಪುಟ ಇಲ್ಲಿದೆ :- 


ಈ ಹೊತ್ತಗೆಯಲ್ಲಿ ಒಂದೇ ಪದ ಬೇರೆ ಊರುಗಳಲ್ಲಿ ಹೇಗೆ ಬಳಕೆಯಾಗಿದೆ ಎಂದು ತಿಳಿಸುವ ಜೊತೆ ಬೇರೆ ಊರುಗಳಲ್ಲಿ ಇದೇ ಪದಕ್ಕೆ ಸಾಟಿಯಾಗಿ ಬಳಕೆಯಾಗುತ್ತಿರುವ ಪದಗಳನ್ನು ಕೂಡ ತಿಳಿಸಲಾಗಿದೆ. ಒಂದೇ ಪದ ಕರ್ನಾಟಕದ ಬೇರೆ ಬೇರೆ ಕಂಪಣಗಳಲ್ಲಿ ಹೇಗೆ ಬಳಕೆಯಲ್ಲಿದೆ ಎಂದು ನಾಡತಿಟ್ಟದ(ಮ್ಯಾಪ್) ನೆರವಿನಿಂದ ತಿಳಿಸಲಾಗಿದೆ. ಒಟ್ಟಿನಲ್ಲಿ ಕನ್ನಡದೊಳಗೆ ಹಲವು ಕನ್ನಡಗಳಿವೆ. 

ಬುಧವಾರ, ಏಪ್ರಿಲ್ 13, 2022

ಕನ್ನಡ ಜಾನಪದ ನಿಘಂಟು

ಕನ್ನಡ ನುಡಿಯಲ್ಲಿ ಹಲವು ಪದನೆರಕೆಗಳು ಹೊರಬಂದಿವೆ ಮತ್ತು ಹಲವು ಬಗೆ ಪದನೆರಕೆಗಳು ಹೊರಬಂದಿವೆ. ಕನ್ನಡ ನುಡಿಯಲ್ಲಿ ಹಿಂದಿನಿಂದಲು ಈ ಕೆಲಸ ನಡೆದುಕೊಂಡು ಬಂದಿದೆ. ಇತ್ತೀಚಗೆ ಇದೇ ಪಟ್ಟಿಗೆ ಹೊಸ ಸೇರ‍್ಪಡೆಯೆಂದರೆ ಅದು "ಕನ್ನಡ ಜಾನಪದ ನಿಘಂಟು". ಈ ಕೆಲಸವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೈಗೆ ಎತ್ತಿಕೊಂಡಿದೆ. ಈ ಪದನೆರಕೆ ಹಲವು ಕಂತುಗಳ ಪದನೆರಕೆಯಾಗಿದೆ ಎಂದು ನಾವು ಗಮನಿಸಬೇಕು. ಇಲ್ಲಿಯ ತನಕ ಅಯ್ದು ಕಂತುಗಳು ಬಿಡುಗಡೆಯಾಗಿದೆ. ಈ ಪದನೆರಕೆ ಕೆಲವು ಹೊದಿಕೆಪುಟ ತಿಟ್ಟಗಳು ಇಲ್ಲಿದೆ :-  



ಇದೊಂದು ದೊಡ್ಡ ಕೆಲಸವೇ ಸರಿ, ಜಾನಪದದಲ್ಲಿ ಬಳಕೆಯಾಗುವ ಹಲವು ಪದಗಳ ಜೊತೆ ಕರ‍್ನಾಟಕದ ಹಲವು ಊರುಗಳ ಕುರಿತು ತಿಳಿವು ಈ ಪದನೆರಕೆಯಲ್ಲಿ ಸಿಗುತ್ತದೆ. ಕನ್ನಡ ನುಡಿಗೆ ಒಂದು ದೊಡ್ಡ ಕೊಡುಗೆಯೆಂದು ಹೇಳಲೇ ಬೇಕು. ಪದಗಳ ಜೊತೆ ಅವುಗಳ ಬಳಕೆ ಕೂಡ ಇದೆ. ಇದರ ಜೊತೆ ಇಂಗ್ಲಿಶ್ ನುಡಿಯಲ್ಲು ಕೂಡ ತಿಳಿವು ನೀಡಲಾಗಿದೆ. ಇಲ್ಲಿಯ ತನಕ ಅಯ್ದು ಕಂತುಗಳು ದೊರಕಿದೆ ಮತ್ತು ಹಲವು ಕಡೆ ಬೆರಗು ಮೂಡಿಸುವ ಒರೆಗಳು ದೊರೆಯುತ್ತವೆ. ಈ ಪದನೆರಕೆ ಕೆಲವು ಒರೆಗಳ ತಿಟ್ಟ ಇಲ್ಲಿದೆ :- 





ಶುಕ್ರವಾರ, ಫೆಬ್ರವರಿ 18, 2022

ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು)

ಕನ್ನಡ ಸಾಹಿತ್ಯ ಪರಿಶತ್ತಿನ ಹಲವು ಕೆಲಸಗಳಲ್ಲಿ ತುಂಬಾ ದೊಡ್ಡ ಕೆಲಸವೆಂದರೆ "ಕನ್ನಡ ನಿಘಂಟು". ಇದು ಎಂಟು ಕಂತುಗಳ ಕೆಲಸ, ೯೦೨೨ ಪುಟಗಳ ಪದನೆರಕೆ ಜೊತೆ ಹಲವು ಏಡುಗಳ ಕೆಲಸ. ಇದರ ಮೊದಲ ಕಂತು ೧೯೭೦ ಬಿಡುಗಡೆಯಾಗಿ ಕೊನೆಯ ಕಂತು ೧೯೯೫ ನಲ್ಲಿ ಬಿಡುಗಡೆಯಾಯಿತು. ಇದರ ಮರುವಚ್ಚು ೨೦೧೦ ನಲ್ಲಿ ನಡೆಯಿತು. 

ಈ ಪದನೆರಕೆಯಲ್ಲಿ ಯಾವುದೇ ಒರೆ ನೋಡಿದರೆ ಅದರ ಹುರುಳು ಮತ್ತು ತಿಳಿವು ನೀಡುವುದರ ಜೊತೆ ಒರೆ ಬಳಕೆಗಳು ಕೂಡ ನೀಡಲಾಗಿದೆ. ಕೊನೆಯಲ್ಲಿ ಇದು ಕನ್ನಡದ್ದೇ ಒರೆ ಆಗಿದ್ದರೆ "ದೇ" ಗುರುತು ಕಾಣುತ್ತದೆ ಇಲ್ಲದಿದ್ದರೆ ಯಾವ ನುಡಿಯಿಂದ ಬಂದ ಪದವೆಂದು ಗುರುತಿನಿಂದ ತಿಳಿಯುತ್ತದೆ. ಎತ್ತುಗೆ :- "ಸಂ" ಅಂದರೆ ಸಂಸ್ಕೃತ. ಈ ಪದನೆರಕೆ ಒಂದು ಕಂತಿನ ಹೊದಿಕೆತಿಟ್ಟ ಇಲ್ಲಿದೆ :- 



ಎಂಟು ಕಂತುಗಳಲ್ಲಿ ಹಲವು ಹಲವು ಒರೆಗಳವೆ, ಅದರಲ್ಲಿ ಕೆಲವು ಇಲ್ಲಿ ಕೆಳಗಿನ ತಿಟ್ಟಗಳಲ್ಲಿ ಕಾಣಬಹುದು :- 






ಬುಧವಾರ, ಫೆಬ್ರವರಿ 16, 2022

ಕನ್ನಡ ಒಳನುಡಿಗಳ ಕೆಲವು ಪದನೆರಕೆಗಳು

ಕನ್ನಡ ನುಡಿಯನ್ನು ಕನ್ನಡಿಗರು ಹಲವು ಬಗೆಗಳಲ್ಲಿ ಮಾತನಾಡುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋದ ಹಾಗೆ ಈ ಮಾರ‍್ಪಾಟುಗಳು ಕಾಣುತ್ತವೆ. ಕನ್ನಡದಲ್ಲಿ ಹಲವು ಒಳನುಡಿಗಳಿವೆ ಎಂದು ಹೇಳಬಹುದು. ಈ ಹಲವು ಒಳನುಡಿಗಳ ಸಲುವಾಗಿ ಕೆಲವು ಒಳನುಡಿ ಪದನೆರಕೆಗಳು ಈ ಬರಹದಲ್ಲಿ ತಿಳಿಸುತ್ತಿದ್ದೇನೆ. 

೧. ಹವ್ಯಕ-ಇಂಗ್ಲಿಶ್ ನಿಘಂಟು :-  ೧೯೮೩ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ :- 



೨. ಚಿಗಟೇರಿ ಪದಕೋಶ :- ೧೯೯೭ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ :-



೩. ಬೀದರ್ ಕನ್ನಡ ಕೋಶ :- ೨೦೧೦ ಏಡಿನಲ್ಲಿ ಬಿಡುಗಡೆಯಾದ ಪದನೆರಕೆ, ತಿಟ್ಟ ಇಲ್ಲಿದೆ :-  



೪. ಮಲೆನಾಡು ನುಡಿಕೋಶ :- ೨೦೧೪ ಏಡಿನಲ್ಲಿ ಹೊರತರಲಾಯಿತು, ತಿಟ್ಟ ಇಲ್ಲಿದೆ:-



೫. ಕುಂದಾಪ್ರ ಕನ್ನಡ ನಿಘಂಟು :- ೨೦೨೧ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ:- 


೬. ಕಾಸರಗೋಡು ಕನ್ನಡ ಪದಕೋಶ :- ೨೦೨೨ ಏಡಿನಲ್ಲಿ ಹೊರಬಂದ ಪದನೆರಕೆ, ಓದುಗೆ ತಿಟ್ಟ ಇಲ್ಲಿದೆ


ಹೀಗೆ ಕನ್ನಡ ಒಳನುಡಿಗಳ ಸಲುವಾಗಿ ಹೆಚ್ಚೆಚ್ಚು ಪದನೆರಕೆಗಳು ಹೊರಬರಲಿ, ಕನ್ನಡ ಇರುವುದೇ ಅದರ ಹಲವುತನದಲ್ಲೇ. 

ಮಂಗಳವಾರ, ಫೆಬ್ರವರಿ 15, 2022

ಮುದ್ದಣ ಪದಪ್ರಯೋಗ ಕೋಶ

ಮುದ್ದಣ (ನಂದಳಿಕೆ ಲಕ್ಶ್ಮಿನಾರಾಯಣಪ್ಪ) ಅವರು ಕೂಡ ಕನ್ನಡ ನಲ್ಬರಹಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವರ ಹಲವು ಬರಹಗಳು ಕುರಿತು ಈಗಲೂ ಹಲವು ನೆನಪುಗಳಿವೆ. ಇದರ ಜೊತೆ ಇವರ ಪದಬಳಕೆ ಕೂಡ ಗಮನ ಸೆಳೆಯುವಂತಹ ಕೆಲಸವಾಗಿತ್ತು. ಇವರ ಪದಬಳಕೆಗಳನ್ನು ಒಟ್ಟುಗೂಡಿಸಿ ಒಂದು ಹೊತ್ತಗೆ ಬಗೆಯಲ್ಲಿ ಜಿ.ವೆಂಕಟಸುಬ್ಬಯ್ಯ ಅವರು ಹಿಂದೆ ಹೊರತಂದರು. ಹೊತ್ತಗೆ ಹೆಸರೇ "ಮುದ್ದಣ ಪದಪ್ರಯೋಗ ಕೋಶ". 

ಈ ಹೊತ್ತಗೆಯಲ್ಲಿರುವ ಕೆಲವು ಕನ್ನಡದ್ದೇ ಒರೆಗಳ ಪಟ್ಟಿ ಇಲ್ಲಿದೆ :- 

ಅಱಿ(ರಿ)ಲ್ = ನಕ್ಷತ್ರ

ಎಲರ್ = ಗಾಳಿ

ಕೆನ್ನೀರ್ = ನೆತ್ತರು, ರಕ್ತ

ಗಾಳೆದೇರ್ = ವಿಮಾನ

ಗಾಳೆವಟ್ಟೆ = ಆಕಾಶ

ತೇರಾಳ್ = ಸಾರಥಿ

ನೇಸರ್ಬಳಿ = ಸೂರ್ಯವಂಶ

ಪೂಣ್ = ಪ್ರತಿಜ್ಞೆಮಾಡು

ಬರ್ದಿಲ = ದೇವತೆ

ಸೂೞ್(ಳ್) = ಸರದಿ, ಸಮಯ

ಹೊತ್ತಗೆ = ಪುಸ್ತಕ

ಮುದ್ದಣ ಅವರ ಪದಬಳಕೆ ಈಗಲೂ ನಮಗೆ ದಾರಿತೋರಿಸುತ್ತದೆ. "ಮುದ್ದಣ ಪದಪ್ರಯೋಗ ಕೋಶ" ಹೊತ್ತಗೆ ತಿಟ್ಟ ಇಲ್ಲಿದೆ :- 



ಕನ್ನಡದ್ದೇ ಒರೆಗಳ ಸುತ್ತಲೂ

ಯಾವುದೇ ನುಡಿಯಾಗಲಿ ಅದರಲ್ಲಿ ತನ್ನದೇ ಒರೆಗಳ ಜೊತೆ ಎರವಲು ಒರೆಗಳಿರುತ್ತವೆ. ನುಡಿಗಳ ನಡುವೆ ಒರೆಗಳು ಓಡಾಡುವುದು ಯಾವಗಲು ನಡೆಯುವ ಕೆಲಸವೇ ಹವುದು. ಕನ್ನಡ ಹೆಮ್ಮರವಾಗಿ ಬೆಳೆದಿರುವ ಒಂದು ನುಡಿಯೆಂದು ಗಮನಿಸಿದಾಗ ಹಿಂದಿನಿಂದಲು ಹಲವು ಕನ್ನಡದ್ದೇ ಒರೆಗಳು ಬಳಕೆಯಲ್ಲಿತ್ತು. ಆದರೆ ಕನ್ನಡದ್ದೇ ಒರೆಗಳ ಸುತ್ತಲೂ ಹಿಂದಿನಿಂದಲು ಒಂದು ಬಗೆಯ ಕೀಳರಿಮೆ ಉಂಟು. ಇದರಿಂದ ಕೆಲವು ಕನ್ನಡದ್ದೇ ಒರೆಗಳು ಬಳಕೆಯಿಂದ ಬಿದ್ದಿವೆ ಹಾಗು ಇನ್ನು ಕೆಲವು ಒರೆಗಳ ಬಳಕೆನೆಲೆ ಕುಗ್ಗಿಸಿ ಬರಿ ಆಡುಮಾತಿನಲ್ಲಿ ಇಲ್ಲವೇ ಕೆಟ್ಟ ನೆಲೆಯಲ್ಲಿ ಬಳಕೆ ಆಗುವುದು ನಾವು ನೋಡಬಹುದು. ಇದರ ಕುರಿತು ಎಲ್.ಗುಂಡಪ್ಪ ಅವರು ಕೂಡ "ಕನ್ನಡ ತಮಿಳು" ಅಂಕಣದಲ್ಲಿ ಹೇಳಿದ್ದಾರೆ. ಅವರ ಮಾತುಗಳು ಕೆಳಗಿನ ತಿಟ್ಟದಲ್ಲಿ ನೋಡಬಹುದು. 


ಮೇಲಿನ ಮಾತುಗಳನ್ನು ಗಮನಿಸಿದರೆ ಕನ್ನಡದ್ದೇ ಒರೆಗಳ ಸುತ್ತಲೂ ಉಂಟಾಗಿರುವ ಕೀಳರಿಮೆ ಕೆಲವು ನಾಳುಗಳ ಮಾತಲ್ಲ ಆದರೆ ಹಿಂದಿನಿಂದಲು ನಡೆದುಕೊಂಡು ಬಂದಿದೆ. ಈ ಹೊತ್ತಿನಲ್ಲಿ ಇದನ್ನು ತಿಳಿದುಕೊಂಡ ಮೇಲೆ, ನಾವು ಎಲ್ಲೆಡೆ ಹೆಚ್ಚೆಚ್ಚು ಕನ್ನಡದ್ಡೇ ಒರೆ ಬಳಸೋಣ. ಎಲ್.ಗುಂಡಪ್ಪ ಅವರ ಈ ಮೇಲಿನ ಮಾತುಗಳು "ಸಂಭಾವನೆ" ಹೊತ್ತಗೆಯ "ಕನ್ನಡ ತಮಿಳು" ಅಂಕಣದಲ್ಲಿದೆ. ಓದುಗೆ ಇಲ್ಲಿಂದ ಕೊಳ್ಳಬಹುದು :- https://harivubooks.com/products/sambhaavane-kannada-book
 


ಸೋಮವಾರ, ಫೆಬ್ರವರಿ 14, 2022

ಗೋವಿಂದ ಪೈ ನಿಘಂಟು

ಕನ್ನಡ ನಲ್ಬರಹಕ್ಕೆ ಹಲವರ ಕೊಡುಗೆ ಹಿಂದಿನಿಂದಲೂ ಇದೆ, ಅದರಲ್ಲಿ ರಾಶ್ಟ್ರಕವಿ ಗೋವಿಂದ ಪಯ್ ಅವರು ಕೂಡ ಒಬ್ಬರು. ಅವರ ಬರಹಗಳು ಹಲವು ಮಂದಿ ತಲುಪಿದೆ ಹಾಗು ಹಲವರ ಮೆಚ್ಚುಗೆ ಪಡೆದಿದೆ. ಹಿರಿಯರ ಪದಬಳಕೆ ಕಡೆ ಕೂಡ ಗಮನ ನೀಡಿ ಅದರ ಸಲುವಾಗಿ ಹೊರತಂದ ಹೊತ್ತಗೆಯೇ "ಗೋವಿಂದ ಪೈ ನಿಘಂಟು". ಈ ಒಟ್ಟುಗೂಡಿಸುವ ಕೆಲಸವನ್ನು ಮಾಡಿದ್ದು ಪ್ರೊ.ಎ.ವಿ.ನಾವಡ ಅವರು. 

"ಗೋವಿಂದ ಪೈ ನಿಘಂಟು" ಹೊತ್ತಗೆಯಲ್ಲಿ ಬಳಕೆಯಾದ ಕೆಲವು ಕನ್ನಡದ್ದೇ ಒರೆಗಳು ಹೀಗಿವೆ :- 

ಇರುಳಾರೆ - ರಾತ್ರಿಯಿಡಿ

ನೇರ್ಮೆ - ನೇರ

ತಾನ್ಮೆ - ತಾನೆಂಬ ಹೆಮ್ಮೆ, ಅಹಂಕಾರ

ಎದುರುಗಾಣಿಕೆ - ಎದುರುಗೊಳ್ಳುವಿಕೆ

ಒಸರಿಹೋಗಿ - ದ್ರವಿಸು

ಹೊಗೆಮೋರೆ - ಹೊಗೆಕಾರುವ ಮುಖ

ಮಾತಾಟ - ಮಾತುಗಾರಿಕೆ

ಮುಟ್ಟು - ಉಪಕರಣ

ಕನ್ನಡಿಕೆ - ಕನ್ನಡೀಕರಣ

ತೆಂಪಡು - ನೈಋತ್ಯ

ತೆಮ್ಮೂಡು - ಅಗ್ನೇಯ

ನಮ್ಮ ಹಿರಿಯರು ಕೂಡ ಹಲವು ಕನ್ನಡದ್ದೇ ಒರೆ ಬಳಸಿದ್ದರು. "ಗೋವಿಂದ ಪೈ ನಿಘಂಟು" ಓದುಗೆ ತಿಟ್ಟ :- 


ಕೊಡವ ಕನ್ನಡ ನಿಘಂಟು

ಪದನೆರಕೆಗಳಲ್ಲಿ ಹಲವು ಬಗೆಗಳಿವೆ, ಅದರಲ್ಲಿ ಇನ್ನುಡಿ ಪದನೆರಕೆಗಳು ಕೂಡ ಒಂದು ಬಗೆ. ಇದಕ್ಕೆ ಒಂದು ಎತ್ತುಗೆ "ಕೊಡವ ಕನ್ನಡ ನಿಘಂಟು". ೧೯೮೩ ಏಡಿನಲ್ಲಿ ಹೊರಬಂದ ಈ ಪದನೆರಕೆ ಆಮೇಲೆ ೨೦೧೪ ನಲ್ಲಿ ಎರಡನೆ ಅಚ್ಚಾಗಿ ಕನ್ನಡ ಸಾಹಿತ್ಯ ಪರಿಶತ್ತಿನಿಂದ ಹೊರತರಲಾಯಿತು.

ಈ ಪದನೆರಕೆಯಲ್ಲಿ ಹಲವು ಕೊಡವ ಪದಗಳ ಜೊತೆ ಬರಹಗಾರರಾದ ಐ.ಮಾ.ಮುತ್ತಣ್ಣ ಅವರ ಕೆಲವು ನಿಲುವುಗಳು ಕೂಡ ಕಾಣಬಹದು, ಅದೇನೆಂದರೆ ಕೊಡವ ನುಡಿಗೆ ಮಹಾಪ್ರಾಣ ಬೇಡದವೆಂದು ತಿಳಿಯಾಗಿ ತಿಳಿಸಿದ್ದಾರೆ, ಅದರ ತಿಟ್ಟ ಇಲ್ಲಿದೆ :- 


"ಕೊಡವ ಕನ್ನಡ ನಿಘಂಟು" ಹೊತ್ತಗೆ ತಿಟ್ಟ ಇಲ್ಲಿದೆ (ಕೊಳ್ಳುವುದಕ್ಕೆ :- https://harivubooks.com/products/kodava-kannada-nighantu-kannada-dictionary) :-