ಚಂದ್ರ, ಸೂರ್ಯ ಒರೆಗಳು ನಮಗೆ ಚೆನ್ನಾಗಿ ಗೊತ್ತಿದೆ. ಈ ಎರಡು ಒರೆಗಳು ಸಂಸ್ಕ್ರುತದಿಂದ ಕನ್ನಡಕ್ಕೆ ಬಂದ ಒರೆಗಳು. ಸೂರ‍್ಯ ಮತ್ತು ಚಂದ್ರನಿಗಿರುವ ಕೆಲವು ಕನ್ನಡದ್ದೇ ಒರೆಗಳನ್ನು ತಿಳಿದುಕೊಳ್ಳೋಣ, ಈ ಬರಹದ ಗುರಿಯೇ ಅದು.
ಮೊದಲಿಗೆ ಸೂರ್ಯಗೆ ಕೆಲವು ಕನ್ನಡದ್ದೇ ಒರೆಗಳು :-
೧. ನೇಸರು
೨. ಹೊತ್ತು (ಹಳೆಗನ್ನಡದಲ್ಲಿ ಪೊೞ್ತು(ಳ್ತು))
೩. ಬೆಂಗದಿರ
೪. ಹಗಲಾಣ್ಮ (ಹಗಲ್ + ಆಣ್ಮ)
೫. ಹಗಲೆರೆಯ (ಹಗಲ್ + ಎರೆಯ)
೬. ಬಿಸಿಗದಿರ (ಬಿಸಿ + ಕದಿರು + -ಅ)
೭. ಚೆಂಗದಿರ
೮. ಕೆಂಗದಿರ
೯. ಬಾನ್ಜೊಡರು (ಬಾನ್ + ಸೊಡರ್)
೧೦. ಹಲ್ಲಿಲಿ (ಹಲ್ಲು + -ಇಲಿ)
೧೧. ಹಗಲೊಡೆಯ (ಹಗಲ್ + ಒಡೆಯ)
ಚಂದ್ರಗೆ ಕೆಲವು ಕನ್ನಡದ್ದೇ ಒರೆಗಳು :-
೧. ತಿಂಗಳ್(ಳು)
೨. ಇರುಳೆರೆಯ (ಇರುಳು + ಎರೆಯ)
೩. ಇರುಳಾಣ್ಮ (ಇರುಳು + ಆಣ್ಮ)
೪. ತಂಗದಿರ
೫. ಚಳಿಗದಿರ (ಚಳಿ + ಕದಿರ್ + -ಅ)
೬. ಕುಳಿರ್ಗದಿರ (ಕುಳಿರ್ + ಕದಿರು + -ಅ)
೭. ಬೆಳ್ಗದಿರ
೮. ಇಂಗದಿರ
ಇಲ್ಲಿ ತಿಂಗಳು ಹಾಗೂ ನೇಸರಕ್ಕೆ ಇನ್ನೂ ಕೆಲವು ಕನ್ನಡದ್ದೇ ಒರೆಗಳು ತಿಳಿಸಲಾಗಿದೆ. ಕನ್ನಡದ್ದೇ ಒರೆಗಳಲ್ಲಿ ಎಂಬ ಮಾತುಗಳನ್ನು ನುಡಿಯುವ ಮುನ್ನ ಮರೆಯಬೇಡಿ, ಕನ್ನಡ ನುಡಿ ಆಳ, ಅಗಲ ನಮ್ಮನ್ನು ಬೆರಗುಗೊಳಿಸುವುದರಲ್ಲಿ ಎರಡು ಮಾತಿಲ್ಲ !!!


.jpg)

