ಶನಿವಾರ, ಸೆಪ್ಟೆಂಬರ್ 2, 2023

ತಿಂಗಳು, ಹೊತ್ತು ಜೊತೆ ಕೆಲವು ಕನ್ನಡದ್ದೇ ಒರೆಗಳು

ಚಂದ್ರ, ಸೂರ್ಯ ಒರೆಗಳು ನಮಗೆ ಚೆನ್ನಾಗಿ ಗೊತ್ತಿದೆ. ಈ ಎರಡು ಒರೆಗಳು ಸಂಸ್ಕ್ರುತದಿಂದ ಕನ್ನಡಕ್ಕೆ ಬಂದ ಒರೆಗಳು. ಹಾಗಾದರೆ ಚಂದ್ರ, ಸೂರ್ಯಗೆ ಕನ್ನಡದ್ದೇ ಒರೆಗಳು ಇವೆಯೇ ? ಎಂಬ ಕೇಳ್ವಿಗೆ ಈ ಬರಹ. ಹೌದು, ಕನ್ನಡದ್ದೇ ಒರೆಗಳಿವೆ. ಅದನ್ನೇ ಮುಂದೆ, ಈ ಬರಹದಲ್ಲಿ ತಿಳಿಸಲಾಗುವುದು.

ಮೊದಲಿಗೆ ಸೂರ್ಯಗೆ ಕೆಲವು ಕನ್ನಡದ್ದೇ ಒರೆಗಳು :- 

೧. ನೇಸರು

೨. ಹೊತ್ತು (ಹಳೆಗನ್ನಡದಲ್ಲಿ ಪೊೞ್ತು(ಳ್ತು))

೩. ಬೆಂಗದಿರ 

೪. ಹಗಲಾಣ್ಮ (ಹಗಲ್ + ಆಣ್ಮ)

೫. ಹಗಲೆರೆಯ (ಹಗಲ್ + ಎರೆಯ)

೬. ಬಿಸಿಗದಿರ (ಬಿಸಿ + ಕದಿರು + -ಅ)

೭. ಚೆಂಗದಿರ

೮. ಕೆಂಗದಿರ 

೯. ಬಾನ್ಜೊಡರು (ಬಾನ್ + ಸೊಡರ್)

೧೦. ಹಲ್ಲಿಲಿ (ಹಲ್ಲು + -ಇಲಿ)

೧೧. ಹಗಲೊಡೆಯ (ಹಗಲ್ + ಒಡೆಯ)

ಇನ್ನೂ ಚಂದ್ರಗೆ ಕೆಲವು ಕನ್ನಡದ್ದೇ ಒರೆಗಳು :- 

೧. ತಿಂಗಳ್(ಳು)

೨. ಇರುಳೆರೆಯ (ಇರುಳು + ಎರೆಯ)

೩. ಇರುಳಾಣ್ಮ (ಇರುಳು + ಆಣ್ಮ)

೪. ತಂಗದಿರ 

೫. ಚಳಿಗದಿರ (ಚಳಿ + ಕದಿರ್ + -ಅ)

೬. ಕುಳಿರ್ಗದಿರ (ಕುಳಿರ್ + ಕದಿರು + -ಅ)

೭. ಬೆಳ್ಗದಿರ 

೮. ಇಂಗದಿರ

ಇಲ್ಲಿ ತಿಂಗಳು ಹಾಗೂ ನೇಸರಕ್ಕೆ ಕೆಲವು ಕನ್ನಡದ್ದೇ ಒರೆಗಳು ತಿಳಿಸಲಾಗಿದೆ. ಕನ್ನಡದ್ದೇ ಒರೆಯಿಲ್ಲ ಎಂಬ ಮಾತುಗಳನ್ನು ನುಡಿಯುವ ಮುನ್ನ ಮರೆಯಬೇಡಿ, ಕನ್ನಡ ನುಡಿ ಆಳ, ಅಗಲ ನಮ್ಮನ್ನು ಬೆರಗುಗೊಳಿಸುವುದರಲ್ಲಿ ಎರಡು ಮಾತಿಲ್ಲ !!!  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ