ಊರಿಂದ ಊರಿಗೆ ಯಾವುದೇ ನುಡಿಯಾಗಲಿ ಆಯ ಊರುಗಳಲ್ಲಿ ಆ ನುಡಿಯನ್ನು ಮಾತನಾಡುವ ಮಂದಿ ಮಾತು ಕೇಳಿದರೆ ಕೆಲವು ಬೇರ‍್ಮೆಗಳು ಕಾಣುತ್ತವೆ. ಇದು ಹೆಚ್ಚುಕಡಿಮೆ ಎಲ್ಲ ನುಡಿಗಳಿಗು ಒಪ್ಪುವ ಮಾತು. ಕರ್ನಾಟಕದಲ್ಲಿ ಮೂವತ್ತೊಂದು ಕಂಪಣಯಿವೆ ಮತ್ತು ಊರಿಂದ ಊರಿಗೆ ಹೋದ ಹಾಗೆ ಆಯ ಊರಿನ ಕನ್ನಡ ಗಮನಿಸಿದರೆ ಬೇರ‍್ಮೆಗಳಿವೆ. ಈ ಹಲವು ಊರುಗಳಲ್ಲಿ ಮಾತನಾಡುವ ಕನ್ನಡ ನಡುವೆಯಿರುವ ಬೇರ‍್ಮೆಗಳು ಯಾವು ? ಹೋಲಿಕೆಗಳು ಯಾವು ? ಕನ್ನಡ ಒಳನುಡಿಗಳ ಸಲುವಾಗಿ ಹಿಂದೆಯೇ ಡೆಕ್ಕನ್ ಕಾಲೇಜ್ ಅವರು ಹಲವು ಹೊತ್ತಗೆಗಳನ್ನು ಹೊರತಂದಿದ್ದರು. ಹೊತ್ತಗೆಗಳ ಪಟ್ಟಿ ಹಾಗು ತಿಟ್ಟ ಇಲ್ಲಿದೆ (https://www.dcpune.ac.in/Publications.html ಕೊಂಡಿಯಲ್ಲು ಹೊತ್ತಗೆ ಪಟ್ಟಿಯಿದೆ) :-
೧. ಗುಲ್ಬರ‍್ಗ ಕನ್ನಡ
೨. ತಿಪಟೂರು ಕನ್ನಡ
೩. ಹಾಲಕ್ಕಿ ಕನ್ನಡ
೪. ಹವ್ಯಕ ಕನ್ನಡ
೫. ಬಾರ್ಕೂರು ಕನ್ನಡ
೬. ನಂಜನಗೂಡ ಕನ್ನಡ
೭. ರಬಕವಿ ಕನ್ನಡ
೮. ಕೂರ್ಗ್ ಕನ್ನಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ