ಕನ್ನಡದ್ದೇ ಪದಗಳ ಕುರಿತಿ ಹಲವು ಸಲ ಹಲವರಿಂದ ಕೇಳಿರಬಹುದು. ಈ ಎಲ್ಲ ಕನ್ನಡದ್ದೇ ಬೇರಿನ ಒರೆಗಳ ಒಂದು ಪಟ್ಟಿ ಇಲ್ಲ ಹೊತ್ತಗೆಯಿದ್ದರೆ ಚೆನ್ನಾಗಿರುತ್ತದೆ ಎಂಬ ಅನಿಸಿಕೆ ಕೂಡ ನಿಮ್ಮಲ್ಲಿ ಇರಬಹುದು. ಹಿಂದೆಯೇ ಅಂದರೆ ೧೮೯೯ ರಲ್ಲೇ ರಾವಸಾಹೇಬ ಪಾಂಡುರಂಗ ವೆಂಕಟೇಶ ಚಿಂತಾಮಣಿಪೇಠಕರ ಅವರ "A Manual of Sanskrit and Kanarese Roots" ಓದುಗೆ ಬಿಡುಗಡೆ ಆಗಿತ್ತು. ಓದುಗೆ ಮೊದಲಲ್ಲಿ ಸಂಸ್ಕ್ರುತ ಬೇರುಗಳನ್ನು ತಿಳಿಸುತ್ತದೆ ಮತ್ತು ಅದಾದ ಮೇಲೆ ಕನ್ನಡದ್ದೇ ಬೇರುಗಳನ್ನು ತಿಳಿಸುತ್ತದೆ. ಹೊತ್ತಗೆಯಿಂದ ಒಂದು ಹಾಳೆಬದಿ ತಿಟ್ಟ ಇಲ್ಲಿದೆ :-
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ