ಯಾವುದೇ ನುಡಿಯಾಗಲಿ ಅದಕ್ಕೆ ಪದಗಳೇ ತಿರುಳು. ಹೊಸ ಬೆಳವಣಿಗೆಗಳು, ಹೊಸದು ಕಂಡುಕೊಂಡಾಗ ಇಲ್ಲ ಕಂಡುಹಿಡಿದಾಗ ಆಗ ಅಲ್ಲಿ ಹೊಸ ಪದಗಳನ್ನು ಹಿಂದಿನಿಂದಲೂ ಕಟ್ಟುತ್ತಾ ಬಂದಿರುವುದು ನಾವು ನೋಡಿದ್ದೇವೆ. ಪದಕಟ್ಟಣೆ ನಿಲ್ಲದ ಕೆಲಸ, ಕನ್ನಡದಲ್ಲು ನಡೆದುಕೊಂಡು ಬಂದಿದೆ. ಕನ್ನಡ ಪದಕಟ್ಟಣೆಯಲ್ಲಿ ಎಲ್ಲ ಕನ್ನಡಿಗರು ಪಾಲ್ಗೊಳ್ಳಬಹುದು, ಅದರ ಸುತ್ತಲೂ ಕೆಲವು ಮಾತುಗಳು ಈ ಬರಹದಲ್ಲಿ.
ಮೊದಲನೆ ಹೆಜ್ಜೆ ಏನೆಂದರೆ ಕನ್ನಡ ಪದಕಟ್ಟಣೆಗೆ ನಾನು ಬಳಸುತ್ತಿರುವ ಪದ ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳುವುದಕ್ಕೆ ಈ ಕೆಳಗಿನ ಹೊತ್ತಗೆಗಳು ನೆರವು ನೀಡುತ್ತವೆ:-
೧. ಅಚ್ಚಗನ್ನಡ ನುಡಿಕೋಶ (ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು)
ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಒರೆಗಳು. ಈ ಹೊತ್ತಗೆಯನ್ನು https://harivubooks.com/products/acchagannadada-nudikosha ಇಂದ ಕೊಳ್ಳಬಹುದು ಇಲ್ಲ ಯಾವಾಗಲೂ ನನ್ನ ಚೂಟಿಯುಲಿಯಲ್ಲಿ (Smart Phone) ನೋಡುವ ಬಯಕೆಯಿದ್ದರೆ https://mylang.in/products/achchagannada-nudikosha-inr ಇಂದ ಕೊಳ್ಳಬಹುದು.
೨. ದ್ರಾವಿಡಭಾಷಾ ಜ್ಞಾತಿಪದಕೋಶ (ಕನ್ನಡ ಸಾಹಿತ್ಯ ಪರಿಷತ್ತು)
ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಜೊತೆಗೆ ದ್ರಾವಿಡ ನುಡಿಗಳಾದ ತಮಿಳು, ತೆಲುಗು, ತುಳು, ಕೊಡವ ನುಡಿ ಸಾಟಿಯೊರೆಗಳು ಕೂಡ ನೀಡಲಾಗಿದೆ. ಈ ಹೊತ್ತಗೆಯನ್ನು https://harivubooks.com/products/dravidabhaasha-jnaatipadakosha ಇಂದ ಕೊಳ್ಳಬಹುದು.
೩. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (೪ ಸಂಪುಟಗಳು)"
ಅ. ಈ ಹೊತ್ತಗೆಯು ಇಲ್ಲಿಂದ ಇಳಿಸಿಕೊಳ್ಳಬಹುದು :-
ಮೊದಲ ಕಂತು :- https://archive.org/details/kannada-dict-vol-1
ಎರಡನೆ ಕಂತು :- https://archive.org/details/Kannada_dict_Vol2
ಮೂರನೆ ಕಂತು :- https://archive.org/details/Kannada_dict_Vol3
ನಾಲ್ಕನೆ ಕಂತು :- https://archive.org/details/Kannada_dict_Vol4
ಕನ್ನಡದ್ದೇ ಒರೆ(ಪದ)ಯಾಗಿದ್ದರೆ ಅದು ದೊಡ್ಡದಾಗಿ ಅಚ್ಚಾಗಿರುತ್ತದೆ, ಎರವಲು ಆಗಿದ್ದರೆ ಸಣ್ಣದಾಗಿ ಅಚ್ಚಾಗಿರುತ್ತದೆ.ಆ. ಈ ಪದನೆರಕೆ ಮಿಂಬಲೆಯಲ್ಲು ಇದೆ. ಅದರ ಕೊಂಡಿ :- https://dsal.uchicago.edu/dictionaries/kittel/
ಆದರೆ ಇಲ್ಲಿ ಪದ ಹುಡುಕಿದರೆ ಅದು ಯಾವುದೇ ಪದವಾದರು, ಅದು ಕನ್ನಡದ್ದೇ ಒರೆ ಎಂದು ನೇರವಾಗಿ ತಿಳಿಯುವುದಿಲ್ಲ. ತಿಳಿದುಕೊಳ್ಳಲು ಹೇಗೆ ಎಂದು, ಒಂದು ಎತ್ತುಗೆ ನೀಡುವೆ. ಎತ್ತುಗೆಗಾಗಿ "ಸೊಡರು" ಒರೆ ಹುಡುಕೋಣ, ಹುಡುಕಿದಾಗ ಹಲವು ದೊರೆತಗಳು ಬರುತ್ತವೆ. ಅದರಲ್ಲಿ "ಸೊಡರು" ಪದಕ್ಕೆ ಬಂದಿರುವ ದೊರೆತಗಳ ಕಡೆ ಗಮನ ನೀಡೋಣ, ಈ ಎತ್ತುಗೆಯಲ್ಲಿ ಸೊಡರು ತೆಗೆದುಕೊಂಡಿರುವುದರಿಂದ "ಸೊಡರು" ಬಂದದಿರುವ ದೊರೆತಗಳನ್ನು ನೋಡೋಣ.
ಇದರಲ್ಲಿ "ka." ಮುಂದೆ ಇರುವುದು ಎಲ್ಲವು ಕನ್ನಡದ್ದೇ ಒರೆಗಳು ಆದರೆ ಇಂಗ್ಲಿಶ್ ಬರಿಗೆಗಳ ನೆರವಿನಿಂದ ಹುಡುಕಬೇಕು.
೫. ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು) (೮ ಸಂಪುಟಗಳು) :-
ಇದು ಎಂಟು ಕಂತಿನ ಪದನೆರಕೆ, ಇಲ್ಲಿ ಎಲ್ಲ ಒರೆಗಳ ಹುರುಳು, ತಿಳಿವು ಜೊತೆ ಅದು ಎಲ್ಲಿ ಬಳಕೆಯಾಗಿತ್ತೆಂದು ತಿಳಿಸುತ್ತದೆ. ಒರೆಯ ಕೊನೆಯಲ್ಲಿ ಇದು ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳಬಹುದು, "ದೇ" ಎಂದು ಕಂಡರೆ ಅದು ಕನ್ನಡದ್ದೇ ಒರೆ, ಒಂದು ಎತ್ತುಗೆ ಕೆಳಗಿನ ತಿಟ್ಟದಲ್ಲಿದೆ :-

