ಪದಕಟ್ಟಣೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪದಕಟ್ಟಣೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 19, 2024

ಕನ್ನಡ ಪದಕಟ್ಟಣೆ - ಪಾಲ್ಗೊಳ್ಳುವಿಕೆ ಕುರಿತು

ಯಾವುದೇ ನುಡಿಯಾಗಲಿ ಅದಕ್ಕೆ ಪದಗಳೇ ತಿರುಳು. ಹೊಸ ಬೆಳವಣಿಗೆಗಳು, ಹೊಸದು ಕಂಡುಕೊಂಡಾಗ ಇಲ್ಲ ಕಂಡುಹಿಡಿದಾಗ ಆಗ ಅಲ್ಲಿ ಹೊಸ ಪದಗಳನ್ನು ಹಿಂದಿನಿಂದಲೂ ಕಟ್ಟುತ್ತಾ ಬಂದಿರುವುದು ನಾವು ನೋಡಿದ್ದೇವೆ. ಪದಕಟ್ಟಣೆ ನಿಲ್ಲದ ಕೆಲಸ, ಕನ್ನಡದಲ್ಲು ನಡೆದುಕೊಂಡು ಬಂದಿದೆ. ಕನ್ನಡ ಪದಕಟ್ಟಣೆಯಲ್ಲಿ ಎಲ್ಲ ಕನ್ನಡಿಗರು ಪಾಲ್ಗೊಳ್ಳಬಹುದು, ಅದರ ಸುತ್ತಲೂ ಕೆಲವು ಮಾತುಗಳು ಈ ಬರಹದಲ್ಲಿ. 

ಮೊದಲನೆ ಹೆಜ್ಜೆ ಏನೆಂದರೆ ಕನ್ನಡ ಪದಕಟ್ಟಣೆಗೆ ನಾನು ಬಳಸುತ್ತಿರುವ ಪದ ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳುವುದಕ್ಕೆ ಈ ಕೆಳಗಿನ ಹೊತ್ತಗೆಗಳು ನೆರವು ನೀಡುತ್ತವೆ:- 

೧. ಅಚ್ಚಗನ್ನಡ ನುಡಿಕೋಶ (ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು) 

ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಒರೆಗಳು. ಈ ಹೊತ್ತಗೆಯನ್ನು https://harivubooks.com/products/acchagannadada-nudikosha ಇಂದ ಕೊಳ್ಳಬಹುದು ಇಲ್ಲ ಯಾವಾಗಲೂ ನನ್ನ ಚೂಟಿಯುಲಿಯಲ್ಲಿ (Smart Phone) ನೋಡುವ ಬಯಕೆಯಿದ್ದರೆ https://mylang.in/products/achchagannada-nudikosha-inr ಇಂದ ಕೊಳ್ಳಬಹುದು.

೨. ದ್ರಾವಿಡಭಾಷಾ ಜ್ಞಾತಿಪದಕೋಶ (ಕನ್ನಡ ಸಾಹಿತ್ಯ ಪರಿಶತ್ತು)

ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಜೊತೆಗೆ ದ್ರಾವಿಡ ನುಡಿಗಳಾದ ತಮಿಳು, ತೆಲುಗು, ತುಳು, ಕೊಡವ ನುಡಿ ಸಾಟಿಯೊರೆಗಳು ಕೂಡ ನೀಡಲಾಗಿದೆ. ಈ ಹೊತ್ತಗೆಯನ್ನು  https://harivubooks.com/products/dravidabhaasha-jnaatipadakosha ಇಂದ ಕೊಳ್ಳಬಹುದು.

೩. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (೪ ಸಂಪುಟಗಳು)" 

ಅ. ಈ ಹೊತ್ತಗೆಯು ಇಲ್ಲಿಂದ ಇಳಿಸಿಕೊಳ್ಳಬಹುದು :- 

ಮೊದಲ ಕಂತು :- https://archive.org/details/kannada-dict-vol-1

ಎರಡನೆ ಕಂತು :- https://archive.org/details/Kannada_dict_Vol2

ಮೂರನೆ ಕಂತು :- https://archive.org/details/Kannada_dict_Vol3

ನಾಲ್ಕನೆ ಕಂತು :- https://archive.org/details/Kannada_dict_Vol4 

ಕನ್ನಡದ್ದೇ ಒರೆ(ಪದ)ಯಾಗಿದ್ದರೆ ಅದು ದೊಡ್ಡದಾಗಿ ಅಚ್ಚಾಗಿರುತ್ತದೆ, ಎರವಲು ಆಗಿದ್ದರೆ ಸಣ್ಣದಾಗಿ ಅಚ್ಚಾಗಿರುತ್ತದೆ. 

ಆ. ಈ ಪದನೆರಕೆ ಮಿಂಬಲೆಯಲ್ಲು ಇದೆ. ಅದರ ಕೊಂಡಿ :- https://dsal.uchicago.edu/dictionaries/kittel/

ಆದರೆ ಇಲ್ಲಿ ಪದ ಹುಡುಕಿದರೆ ಅದು ಯಾವುದೇ ಪದವಾದರು, ಅದು ಕನ್ನಡದ್ದೇ ಒರೆ ಎಂದು ನೇರವಾಗಿ ತಿಳಿಯುವುದಿಲ್ಲ. ತಿಳಿದುಕೊಳ್ಳಲು ಹೇಗೆ ಎಂದು, ಒಂದು ಎತ್ತುಗೆ ನೀಡುವೆ. ಎತ್ತುಗೆಗಾಗಿ  "ಸೊಡರು" ಒರೆ ಹುಡುಕೋಣ, ಹುಡುಕಿದಾಗ ಹಲವು ದೊರೆತಗಳು ಬರುತ್ತವೆ. ಅದರಲ್ಲಿ "ಸೊಡರು" ಪದಕ್ಕೆ ಬಂದಿರುವ ದೊರೆತಗಳ ಕಡೆ ಗಮನ ನೀಡೋಣ, ಈ ಎತ್ತುಗೆಯಲ್ಲಿ ಸೊಡರು ತೆಗೆದುಕೊಂಡಿರುವುದರಿಂದ "ಸೊಡರು" ಬಂದದಿರುವ ದೊರೆತಗಳನ್ನು ನೋಡೋಣ.








ಈಗ ಪದದ ಬಲಬದಿಯಲ್ಲೇ ಹಾಳೆಬದಿ(ಪುಟ) ಮತ್ತು ಎಣಿ(ಸಂಖ್ಯೆ) ಕಾಣುತ್ತದೆ. ಈ ಎತ್ತುಗೆಯಲ್ಲಿ ಅದು 1671, ಅದನ್ನು ಒತ್ತೋಣ ಆಗ ಈ ಮಿಂಪುಟ ತೆರೆದುಕೊಳ್ಳುತ್ತದೆ, ಮಿಂಪುಟದ ಮೇಲ್ಬದಿ ಇಲ್ಲಿದೆ, ಮುಂದಿನ ಹೆಜ್ಜೆಗೆ ಇದೇ ಸಾಕು.






ಈ ಮೇಲಿನ ತಿಟ್ಟದಲ್ಲಿ "click for page image" ಒತ್ತಿದರೆ ಪದನೆರಕೆ ಆ ಹಾಳೆಬದಿ(ಪುಟ) ತೆರೆದುಕೊಳ್ಳುತ್ತದೆ, ಪದ ದೊಡ್ಡದಾಗಿ ಕಂಡರೆ ಅದು ಕನ್ನಡದ್ದೇ ಒರೆ, "ಸೊಡರು" ದೊಡ್ಡದಾಗಿ ಕಾಣುತ್ತದೆ, ಹಾಗಾಗಿ ಅದು ಕನ್ನಡದ್ದೇ ಒರೆ. 



೪. Dravidian Etymlogical Dictionary : https://dsal.uchicago.edu/dictionaries/burrow/ 

ಇದರಲ್ಲಿ "ka." ಮುಂದೆ ಇರುವುದು ಎಲ್ಲವು ಕನ್ನಡದ್ದೇ ಒರೆಗಳು ಆದರೆ ಇಂಗ್ಲಿಶ್ ಬರಿಗೆಗಳ ನೆರವಿನಿಂದ ಹುಡುಕಬೇಕು. 

೫. ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಶತ್ತು) (೮ ಸಂಪುಟಗಳು) :-

ಇದು ಎಂಟು ಕಂತಿನ ಪದನೆರಕೆ, ಇಲ್ಲಿ ಎಲ್ಲ ಒರೆಗಳ ಹುರುಳು, ತಿಳಿವು ಜೊತೆ ಅದು ಎಲ್ಲಿ ಬಳಕೆಯಾಗಿತ್ತೆಂದು ತಿಳಿಸುತ್ತದೆ. ಒರೆಯ ಕೊನೆಯಲ್ಲಿ ಇದು ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳಬಹುದು, "ದೇ" ಎಂದು ಕಂಡರೆ ಅದು ಕನ್ನಡದ್ದೇ ಒರೆ, ಒಂದು ಎತ್ತುಗೆ ಕೆಳಗಿನ ತಿಟ್ಟದಲ್ಲಿದೆ :- 


ಕನ್ನಡ ಪದಕಟ್ಟಣೆಯಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸುವುದಕ್ಕೆ ಮೇಲಿನ ಹೊತ್ತಗೆಗಳ ನೆರವು ಪಡೆದ ಮೇಲೆ ಈ ಬರಹದಲ್ಲಿ (https://nesaranagu.blogspot.com/2023/08/blog-post_28.html) ನೀಡಿರುವ ಹಲವು ಹೊತ್ತಗೆಗಳ ನೆರವು ಪಡೆಯಬಹುದು. ಅದರಲ್ಲಿ "ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ" ಹೊತ್ತಗೆ ತುಂಬಾ ನೆರವು ನೀಡುತ್ತದೆ ಎನ್ನುವುದು ನನ್ನ ಅನಿಸಿಕೆ. ಹೀಗೆ ಹೆಚ್ಚೆಚ್ಚು ಕನ್ನಡ ಪದ ಕಟ್ಟೋಣ. ಕನ್ನಡ ನಾಳೆಗಳನ್ನು ಕಟ್ಟೋಣ.

ಶನಿವಾರ, ಜನವರಿ 6, 2024

ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಹೊತ್ತಗೆಗಳ ಓದು

ಕನ್ನಡ ನುಡಿಯರಿಮೆ, ಸೊಲ್ಲರಿಮೆ ಸಲುವಾಗಿ ಹಲವು ಓದುಗೆಗಳನ್ನು ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರು ಬರೆದಿದ್ದಾರೆ. ಅವರ ಹೊತ್ತಗೆಗಳನ್ನು ಯಾವ ಓರಣದಲ್ಲಿ ಓದಬೇಕೆಂಬ ಕೇಳ್ವಿ ಆಗಾಗ ಮೂಡುತ್ತದೆ, ಅದರ ಸಲುವಾಗಿ ಈ ಬರಹ ಬರೆದಿದ್ದೇನೆ. ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹಲವು ಓದುಗೆಗಳನ್ನು ಹಲವು ಓರಣ(ಕ್ರಮ)ಗಳಲ್ಲಿ ಓದಬಹುದು, ಅದರಲ್ಲಿ ಒಂದು ಓರಣ ಈ ಬರಹದಲ್ಲಿ ತಿಳಿಸಲಾಗುವುದು. 

ಹಿರಿಯರ ಬಗ್ಗೆ ಇತ್ತೀಚಗಶ್ಟೇ ಗೊತ್ತಾಗಿದೆ, ಎಲ್ಲಿಂದ ತೊಡಗುವುದೆಂದು ಕೇಳ್ವಿ ಮೂಡುವುದು ಸರಿ, ಅದಕ್ಕೆ ಮಾರ‍್ನುಡಿ ಇಲ್ಲಿದೆ :-

ಮೊದಲ ಹೆಜ್ಜೆಗಳಿಗೆ ಈ ಹೊತ್ತಗೆಗಳನ್ನು ಓದಬಹುದು :- 

೧. ನುಡಿಯ ಬಗೆಗೆ ನೀವೇನು ಬಲ್ಲಿರಿ ?  

೨. ಕನ್ನಡ ನುಡಿಯರಿಮೆಯ ಇಣುಕುನೋಟ

೩. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ

೪. ಮಾತಿನ ಒಳಗುಟ್ಟು

೫. ಮಾತು ಮತ್ತು ಬರಹದ ನಡುವಿನ ಗೊಂದಲ

ಮೇಲಿನ ಹೊತ್ತಗೆಗಳನ್ನು ಓದಿದ ಮೇಲೆ ಪದಕಟ್ಟಣೆಯಲ್ಲಿ ಮುಂದುವರೆಯಲು ಬಯಸಿದರೆ ಈ ಕೆಳಗಿನ ಹೊತ್ತಗೆ ಓದಬಹುದು :- 

೬. ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

ಪದಕಟ್ಟಣೆ ಜೊತೆ ಕನ್ನಡದ್ದೇ ಒರೆಗಳು ತಿಳಿದುಕೊಳ್ಳವ ಹಂಬಲವಿದ್ದರೆ ಈ ಕೆಳಗಿನ ಹೊತ್ತಗೆಗಳನ್ನು ಬಳಸಬಹುದು :-

೭. ಇಂಗ್ಲಿಶ್-ಕನ್ನಡ ಪದನೆರಕೆ

೮. ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು 

ಸೊಲ್ಲರಿಮೆ(ವ್ಯಾಕರಣ) ಕವಲಿನಲ್ಲಿ ಮುಂದುವರೆಯಲು ಬಯಸಿದರೆ ಈ ಹೊತ್ತಗೆಗಳನ್ನು ಓದಬಹುದು :- 

೬. ಕನ್ನಡ ವ್ಯಾಕರಣ ಯಾಕೆ ಬೇಕು ? 

೭. ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ

೮. ಕನ್ನಡ ಬರಹದ ಸೊಲ್ಲರಿಮೆ - ೧ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೯. ಕನ್ನಡ ಬರಹದ ಸೊಲ್ಲರಿಮೆ - ೨ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೦. ಕನ್ನಡ ಬರಹದ ಸೊಲ್ಲರಿಮೆ - ೩ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೧. ಕನ್ನಡ ಬರಹದ ಸೊಲ್ಲರಿಮೆ - ೪ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೨. ಕನ್ನಡ ಬರಹದ ಸೊಲ್ಲರಿಮೆ - ೫ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೩. ಕನ್ನಡ ಬರಹದ ಸೊಲ್ಲರಿಮೆ - ೬ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೪. ಕನ್ನಡ ಬರಹದ ಸೊಲ್ಲರಿಮೆ - ೭ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೫. ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು

ಹವ್ಯಕ ಕನ್ನಡ ಕುರಿತು ತಿಳಿದುಕೊಳ್ಳುವ ಬಯಕೆಯಿದ್ದರೆ ಈ ಕೆಳಗಿನ ಹೊತ್ತಗೆ ಓದಬಹುದು :- 

೬. ಹವ್ಯಕ ಕನ್ನಡ  

ಹಳೆಗನ್ನಡದಿಂದ ಈಗಿನ ಕನ್ನಡದ ತನಕ ನಡೆದಿರುವ ಮಾರ‍್ಪಾಟುಗಳ ಜೊತೆ ಹಳೆಗನ್ನಡ ಸೊಲ್ಲರಿಮೆ ಕುರಿತು ತಿಳಿದುಕೊಳ್ಳುವ ಹಂಬಲಕ್ಕೆ ಈ ಹೊತ್ತಗೆಗಳನ್ನು ಓದಬಹುದು :-

೬. ಕನ್ನಡ ನುಡಿ ನಡೆದು ಬಂದ ದಾರಿ

೭. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು ?

ಕನ್ನಡ ಬರಹಗಳಲ್ಲಿ ಕಾಣುವ ಬರಹದ ಗೊಂದಲಗಳು, ಪದಬಳಕೆ ಗೊಂದಲಗಳ ಕುರಿತು ಆಳವಾಗಿ ತಿಳಿದುಕೊಳ್ಳಲು ಬಯಸಿದರೆ ಈ ಹೊತ್ತಗೆ ಓದಬಹುದು :-

೬. ಕನ್ನಡ ಬರಹವನ್ನು ಸರಿಪಡಿಸೋಣ 

ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹೊತ್ತಗೆಗಳನ್ನು ಇಲ್ಲಿಂದ ಕೊಳ್ಳಬಹುದು :- https://harivubooks.com/collections/dn-shankara-bhat-kannada-books

ಸೋಮವಾರ, ಆಗಸ್ಟ್ 28, 2023

ಕನ್ನಡದಲ್ಲಿ ಪದಕಟ್ಟಣೆ - ನೆರವು ನೀಡುವ ಕೆಲವು ಹೊತ್ತಗೆ ಪಟ್ಟಿ

ಪದ ಕಟ್ಟಣೆಗೆ ನೆರವು ನೀಡಬಲ್ಲ ಕೆಲವು ಓದುಗೆಗಳ ಪಟ್ಟಿ:-

೧. ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ:- https://harivubooks.com/products/kannadadalle-padagalannu-kattuva-bagge)

೨. ಇಂಗ್ಲಿಶ್-ಕನ್ನಡ ಪದನೆರಕೆ - ಡಾ || ಡಿ.ಎನ್.ಶಂಕರ್ ಬಟ್
(ಕೊಳ್ಳುವುದಕ್ಕೆ:- https://harivubooks.com/products/english-kannada-padanerake)

೩. ಕನ್ನಡ ಬರಹದ ಸೊಲ್ಲರಿಮೆ ೧ - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ :- https://harivubooks.com/products/kannada-barahada-sollarime-1)

೪. ಅಚ್ಚಗನ್ನಡ ನುಡಿಕೋಶ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡ (ಕೊಳ್ಳುವುದಕ್ಕೆ:- https://harivubooks.com/products/acchagannadada-nudikosha)

೫. ದ್ರಾವಿಡಭಾಷಾ ಜ್ಞಾತಿಪದಕೋಶ - ಕನ್ನಡ ಸಾಹಿತ್ಯ ಪರಿಶತ್ತು (ಕೊಳ್ಳುವುದಕ್ಕೆ:- https://harivubooks.com/products/dravidabhaasha-jnaatipadakosha)

೬. ಕನ್ನಡ ನಿಘಂಟು (ಎಂಟು ಸಂಪುಟಗಳು) - ಕನ್ನಡ ಸಾಹಿತ್ಯ ಪರಿಶತ್ತು

೭. ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ:- https://harivubooks.com/products/samskruta-padagalige-kannadadde-padagalu)

೮. A Dravidian Etymological Dictionary - M B Emeneau and T Burrow (ಕೊಂಡಿ:- https://dsal.uchicago.edu/dictionaries/burrow/)

೯. ಇಂಗ್ಲಿಷ್ ಕನ್ನಡ ವೈದ್ಯ ಪದಕೋಶ - ಡಾ || ಡಿ.ಎಸ್.ಶಿವಪ್ಪ

೧೦. Enlarged Kittel’s Kannada English Dictionary (Prof.M.Mariappa Bhat) (ಕೊಂಡಿ :- https://dsal.uchicago.edu/dictionaries/kittel/)

೧೧. ಸಂಕ್ಷಿಪ್ತ ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು) (ಕೊಳ್ಳುವುದಕ್ಕೆ :- https://harivubooks.com/products/sankshipta-kannada-nighantu 
ಬಳಕ ಇಲ್ಲಿಂದ ನೆಲೆಗೊಳಿಸಬಹುದು :- https://play.google.com/store/apps/details?id=in.bharatavani.kasapa&hl=kn&pli=1)

೧೨. ಇಂಗ್ಲಿಷ್-ಕನ್ನಡ ನಿಘಂಟು - ಮಯ್ಸೂರು ಕಲಿಕೆವೀಡು :- ಹಿಂದೆ ನಾಲ್ಕು ಕಂತುಗಳಾಗಿ ಬಿಡುಗಡೆಯಾಗಿತ್ತು. ಈಗ ನಾಲ್ಕು ಕಂತುಗಳನ್ನು ಒಟ್ಟುಗೂಡಿಸಿದ ಮೇಲೆ ಒಂದೇ ಕಂತಾಗಿ ದೊರೆಯುತ್ತದೆ. 

೧೩. ಕನ್ನಡ-ಇಂಗ್ಲಿಷ್ ನಿಘಂಟು - ವಿ.ಕ್ರುಶ್ಣ (ಕರ‍್ನಾಟಕ ಸಾಹಿತ್ಯ ಪರಿಶತ್ತು) :- ಮೂರು ಕಂತುಗಳ ಪದನೆರಕೆ

೧೪. ಕನ್ನಡ ಶಬ್ದಾರ್ಥಕೋಶ - ಶ್ರೀ ಟಿ.ಕೆ.ಅನಂತನಾರಾಯಣ (ಕಾಮದೇನು ಪುಸ್ತಕ ಬವನ)

ಕೆಲವು ಒಳನುಡಿ ಪದನೆರಕೆಗಳ ನೆರವು ಕೂಡ ಪಡೆಯಬಹುದು, ಪಟ್ಟಿ ಇಲ್ಲಿದೆ :-

೧. ಹವ್ಯಕ-ಇಂಗ್ಲಿಷ್ ನಿಘಂಟು - ಮರಿಯಪ್ಪ ಬಟ್

೨. ಚಿಗಟೇರಿ ಪದಕೋಶ - ಮುದೇನೂರು ಸಂಗಣ್ಣ

೩. ಕುಂದಾಪ್ರ ಕನ್ನಡ ನಿಘಂಟು - ಪಂಜು ಗಂಗೊಳ್ಳಿ

೪. ಮಲೆನಾಡು ನುಡಿಕೋಶ - ವೇಣಾಕ್ಷಿ ಎಸ್.ಡಿ

೫. ಕಾಸರಗೋಡು ಕನ್ನಡ ಪದಕೋಶ - ಡಾ || ಎ.ಮೋಹನ್ ಕುಂಟಾರ್

೬. ಬೀದರ ಕನ್ನಡ ಕೋಶ - ದೇಶಾಂಶ ಹುಡಗಿ

ಈ ಕೆಲವು ಹೊತ್ತಗೆಗಳು ಬರಹಗಾರರ ಪದಬಳಕೆ ಸಲುವಾಗಿ ಬರೆದಿರುವುದು, ಇವು ಕೂಡ ನೆರವಿಗೆ ಬರುತ್ತದೆ :-

೧. ಮುದ್ದಣ ಪದಪ್ರಯೋಗ ಕೋಶ - ಜಿ.ವೆಂಕಟಸುಬ್ಬಯ್ಯ

೨. ಗೋವಿಂದ ಪೈ ನಿಘಂಟು - ಪ್ರೊ.ಎ.ವಿ.ನಾವಡ

೩. ಬೇಂದ್ರೆಕಾವ್ಯ : ಪದನಿರುಕ್ತ - ಡಾ || ಜಿ.ಕೃಷ್ಣಪ್ಪ

೪. ಕುವೆಂಪು ಸಾಹಿತ್ಯ ಪದವಿವರಣೆ ಕೋಶ (ಎಂಟು ಕಂತುಗಳು) - ಕುವೆಂಪು ವಿಶ್ವವಿದ್ಯಾನಿಲಯ

೫. ಕುವೆಂಪು ಪದಸೃಷ್ಟಿ - ಡಾ || ಜಿ.ಕ್ರುಷ್ಣಪ್ಪ (ಕೊಳ್ಳುವುದಕ್ಕೆ:- https://harivubooks.com/products/kuvempu-padashrushti-literature-dr-g-krishnappa-kannada-book) 

೬. ಕುಮಾರವ್ಯಾಸಭಾರತ ಪದಪ್ರಯೋಗಕೋಶ - ವಿ.ಕ್ರುಶ್ಣ (ಕಾಮದೇನು ಪುಸ್ತಕ ಬವನ) :- ಇದು ಎರಡು ಕಂತುಗಳಲ್ಲಿದೆ (ಕೊಳ್ಳುವುದಕ್ಕೆ :- https://harivubooks.com/products/kumaravyasabharata-dictionary-v-krishna-kannada-book)

ಹಳೆಗನ್ನಡದ ನೆರವು ಪಡೆಯಲು ಬಯಸಿದರೆ, ಈ ಕೆಳಗಿನ ಹೊತ್ತಗೆಗಳ ನೆರವು ಪಡೆಯಬಹುದು :-

೧. ಹಳಗನ್ನಡ ಶಬ್ದಾರ್ಥಕೋಶ - ಎನ್.ಬಸವಾರಾಧ್ಯ (ಕೊಳ್ಳುವುದಕ್ಕೆ:- https://harivubooks.com/products/halagannada-shabdhaartha-kosha-kannada-book)

೨. ಹಳಗನ್ನಡ ಅರ್ಥಕೋಶ - ಐ.ಎಂ.ಕೊಟ್ರಯ್ಯ (ಕೊಳ್ಳುವುದಕ್ಕೆ:- https://harivubooks.com/products/halagannada-arthakosha-linguishtic-i-m-korraiah-kannada-book) 

೩. ಚಂಪೂ ನುಡಿಗನ್ನಡಿ - ಡಾ || ಪಿ.ವಿ.ನಾರಾಯಣ 

ಶನಿವಾರ, ಆಗಸ್ಟ್ 12, 2023

ಕನ್ನಡದಲ್ಲಿ ಪದಕಟ್ಟಣೆ - ಹಳೆಗನ್ನಡ ನೆರವು

ಹಿಂದಿನ ಬರಹದಲ್ಲಿ ನೋಡಿದ ಹಾಗೆ ಕನ್ನಡದಲ್ಲಿ ಪದಕಟ್ಟಣೆಗೆ ಒಂದು ಹಿನ್ನಡವಳಿಯೇ ಇದೆ. ಪದಕಟ್ಟಣೆ ಕೆಲಸ ನಿಲ್ಲದ ಕೆಲಸವೆಂದು ಅದರಿಂದ ತಿಳಿಯುತ್ತದೆ. ಕನ್ನಡದಲ್ಲಿ  ಪದಕಟ್ಟಣೆಗೆ ಏನೇನು ಬೇಕೆಂದು ಹಲವು ಸಲ ನಮ್ಮಲ್ಲಿ ಕೇಳ್ವಿ ಮೂಡುತ್ತದೆ. ಪದಕಟ್ಟಣೆಗೆ ಬೇರುಪದಗಳು, ಹಿನ್ನೊಟ್ಟುಗಳು(Suffixes), ಪದಬಗೆಗಳು ಇವೆಲ್ಲವೂ ಬೇಕಾಗುತ್ತದೆ. ಇದರಲ್ಲಿ ಬೇರುಪದಗಳು ಹಾಗು ಪದಬಗೆಗಳನ್ನು ಬಳಸಿ ಕನ್ನಡದಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಕಟ್ಟಬಹುದು. 

ಈಗಿರುವ ಕನ್ನಡದ್ದೇ ಒರೆಗಳ ಹುಡುಕಾಟದಲ್ಲಿ ನಾವು ಹಳೆಗನ್ನಡ ಒರೆಗಳ ನೆರವು ಪಡೆಯಬಹುದು, ನೆನಪಿರಲಿ ಹಳೆಗನ್ನಡ ಒರೆಗಳ ನೆರವು ಹೊರತು ಹಳೆಗನ್ನಡ ಒರೆಗಳನ್ನೇ ಹಾಗೆ ಬಳಸಬೇಕೆಂಬ ಕಟ್ಟುಪಾಡಲ್ಲ. ಇಲ್ಲಿ ಒಂದು ಎತ್ತುಗೆ ನೀಡುವೆ, ಹಳಗನ್ನಡದಲ್ಲಿ ಪೊೞ(ಳ)ಲ್ ಎಂಬ ಒರೆಯಿದೆ, ಇದಕ್ಕೆ ನಗರ, ಊರು ಎಂಬ ಒಂದು ಹುರುಳಿದೆ. ಈಗಿನ ಕನ್ನಡ ಇಲ್ಲ ಬರಹಕನ್ನಡದಲ್ಲಿ ಅದು ಹೊಳಲು ಆಗುತ್ತದೆ. ಪದಕಟ್ಟಣೆಗೆ ಪೊೞಲ್ ನೆರವು ಪಡೆದುಕೊಂಡು ಈಗಿನ ಕನ್ನಡದಲ್ಲಿರುವ ಹೊಳಲು ಬಳಸಿ ಕನ್ನಡ ಒರೆ ಕಟ್ಟಬಹುದು. ಹೊಳಲು ಬಳಸಿ ಹೊಳಲಾಳ್ವಿಕೆ (ಹೊಳಲು + ಆಳ್ವಿಕೆ), ಇದು ಊರಿನ ಆಡಳಿತವೆಂದು ತಿಳಿಸುವ ಒಂದು ಒರೆ ಕಟ್ಟಬಹುದು. ಹೀಗೆ ಹಲವು ಕನ್ನಡ ಒರೆಗಳನ್ನು ನಾವು ಕಟ್ಟಬಹುದು. ಇದೇ ಬಗೆಯಲ್ಲಿ ಹಲವು ಎತ್ತುಗೆಗಳನ್ನು ನಾನು ನೀಡಬಲ್ಲೆ.

ಹೀಗೆ ಹಳೆಗನ್ನಡದ ಒರೆಗಳ ನೆರವಿನಿಂದ ಹಲವು ಕನ್ನಡದ್ದೇ ಒರೆ ಕಟ್ಟಬಹುದು. ಇದೆಲ್ಲ ಬರೆಯುವಾಗ ನನಗೆ ನೆನಪಿಗೆ ಬರುವ ಹೊತ್ತಗೆಯೇ "ಕನ್ನಡ ಬರಹವನ್ನು ಸರಿಪಡಿಸೋಣ", ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಈ ಕೆಲಸ ನೆನಪು ಮಾಡಲೇ ಬೇಕು. ಇತ್ತೀಚಗೆ ತಿದ್ದಿದ, ಮೂರನೆ ಅಚ್ಚು ಕಂಡ ಈ ಹೊತ್ತಗೆ ಬಿಡುಗಡೆಯಾಯಿತು. ಹೊತ್ತಗೆ ಮುಂಬದಿ ತಿಟ್ಟ ಇಲ್ಲಿದೆ :- 



ಕನ್ನಡ ಬರಹವನ್ನು ಸರಿಪಡಿಸೋಣ ಓದುಗೆ ಇಲ್ಲಿಂದ ನಾವು ಕೊಳ್ಳಬಹುದು :- https://harivubooks.com/products/kannada-barahavannu-saripadisona 

ಶುಕ್ರವಾರ, ಆಗಸ್ಟ್ 11, 2023

ಕನ್ನಡದಲ್ಲಿ ಪದಕಟ್ಟಣೆ - ಏರೋಪ್ಲೇನ್‍ ಎತ್ತುಗೆ

ಯಾವುದೇ ನುಡಿಯಾಗಲಿ ಅದರಲ್ಲಿ ನಾವು ಹಲವು, ಹಲವು ಒರೆಗಳನ್ನು ಬಳಸುತ್ತೇವೆ. ಇದರ ಜೊತೆ ಹಲವು ನುಡಿಗಳಲ್ಲಿ ಹಲವು ಒರೆಗಳು ಹುಟ್ಟುತ್ತವೆ. ಅವುಗಳಲ್ಲಿ ಕೆಲವು ಮಂದಿ ಬಳಸುತ್ತಾರೆ. ಹೊತ್ತು ಕಳೆದ ಹಾಗೆ ಕೆಲವು ಬಳಕೆಯಿಂದ ತಪ್ಪಿಹೋಗುತ್ತವೆ. ಇವುಗಳ ನಡುವೆ ಒಂದಂತು ಮರೆಯಬಾರದು ಒರೆಕಟ್ಟಣೆ ನಿಲ್ಲದ ಕೆಲಸ, ಎಡೆಬಿಡದೆ ನಡೆಯುತ್ತಿರುತ್ತದೆ. ಕನ್ನಡದಲ್ಲು ಹೀಗೆ ನಡೆದುಕೊಂಡು ಬಂದಿದೆ. 

ಈ ಹೊತ್ತಿನಲ್ಲಿ ಏರೋಪ್ಲೇನ್‍ಗೆ ಕನ್ನಡದಲ್ಲಿ ನಡೆದ ಪದಕಟ್ಟಣೆ ಕುರಿತು ಕೆಲವು ಮಾತುಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಹಿಂದೆ ಮುದ್ದಣ ಅವರು ಇದಕ್ಕೆ "ಗಾಳಿದೇರ್ (ಗಾಳಿ + ತೇರ್)" ಎಂಬ ಒರೆಯನ್ನು ಕಟ್ಟಿ, ಅದನ್ನು ತಮ್ಮ ಅದ್ಭುತ ರಾಮಾಯಣ ಬರಹದಲ್ಲಿ ಬಳಸಿದ್ದರು.

ಇದು ಇಲ್ಲಿಗೆ ಮುಗಿಲಿಲ್ಲ, ಡಿ.ಎಲ್.ನರಸಿಂಹಾಚಾರ್ ಅವರ "ಪೀಠಿಕೆಗಳು, ಲೇಖನಗಳು" ಹೊತ್ತಗೆಯ "ಕನ್ನಡದಲ್ಲಿ ಶಬ್ದರಚನೆ" (ಹಾಳೆಬದಿ ೮೦೬) ಅಂಕಣ ನೋಡಿದರೆ ಅದರಲ್ಲಿ ಹಿರಿಯರು ಹೇಳುವುದು, ಓರ‍್ವ ಕನ್ನಡಿಗ (ಹೆಸರು ಗೊತ್ತಿಲ್ಲ) ಇದೇ ಏರೋಪ್ಲೇನ್‍ಗೆ "ರೆಕ್ಕೆಬಂಡಿ" ಎಂದು ಒರೆ ಕಟ್ಟಿದ್ದರು. ಡಿ.ಎಲ್.ನರಸಿಂಹಾಚಾರ್ ಅವರ ಮಾತುಗಳ ತಿಟ್ಟ ಇಲ್ಲಿದೆ :- 



ಇದು ಇಲ್ಲಿಗೆ ಮುಗಿಲಿಲ್ಲ, ಹಿರಿಯರಾದ ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು ಕೂಡ ಇದೇ ಏರೋಪ್ಲೇನ್‍ಗೆ ಒಂದು ಒರೆ ಕಟ್ಟಿದ್ದರು, ಅದು "ಬಾನೋಡ (ಬಾನ್ + ಓಡ)" (ಬಾನಿನಲ್ಲಿ ಹಾರುವ ಓಡ (ದೋಣಿ)), ಇದು ಅಚ್ಚಗನ್ನಡ ನುಡಿಕೋಶ ಹೊತ್ತಗೆಯಲ್ಲಿ "ಮಕ್ಕಳ ಮಾತು" ಅಡಿಯಲ್ಲಿ ಕಾಣುತ್ತದೆ. ಅದರ ತಿಟ್ಟ ಇಲ್ಲಿದೆ :- 


ಒಟ್ಟಿನಲ್ಲಿ ಕನ್ನಡದಲ್ಲು ಒರೆಕಟ್ಟಣೆಗೆ ದೊಡ್ಡ ಹಿನ್ನಡವಳಿಯಿದೆ, ಏರೋಪ್ಲೇನ್ ಒಂದೇ ಒರೆಗೆ ಗಾಳಿದೇರ್, ರೆಕ್ಕೆಬಂಡಿ ಮತ್ತು ಬಾನೋಡ ಎಂಬ ಮೂರು ಒರೆಗಳನ್ನು ನಮ್ಮ ಹಿರೀಕರು ಕಟ್ಟಿದ್ದರು. ನಾವು ಇದೇ ಕೆಲಸವನ್ನು ಮುಂದುವರೆಸೋಣ, ಹೆಚ್ಚೆಚ್ಚು ಕನ್ನಡದ್ದೇ ಒರೆ ಕಟ್ಟುವುದರ ಜೊತೆ ಇಡಿನೆಲದ ತಿಳಿವಳಿಕೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವ ಹಾಗೆ ಮಾಡೋಣ.