ಪದನೆರಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪದನೆರಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜನವರಿ 6, 2024

ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಹೊತ್ತಗೆಗಳ ಓದು

ಕನ್ನಡ ನುಡಿಯರಿಮೆ, ಸೊಲ್ಲರಿಮೆ ಸಲುವಾಗಿ ಹಲವು ಓದುಗೆಗಳನ್ನು ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರು ಬರೆದಿದ್ದಾರೆ. ಅವರ ಹೊತ್ತಗೆಗಳನ್ನು ಯಾವ ಓರಣದಲ್ಲಿ ಓದಬೇಕೆಂಬ ಕೇಳ್ವಿ ಆಗಾಗ ಮೂಡುತ್ತದೆ, ಅದರ ಸಲುವಾಗಿ ಈ ಬರಹ ಬರೆದಿದ್ದೇನೆ. ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹಲವು ಓದುಗೆಗಳನ್ನು ಹಲವು ಓರಣ(ಕ್ರಮ)ಗಳಲ್ಲಿ ಓದಬಹುದು, ಅದರಲ್ಲಿ ಒಂದು ಓರಣ ಈ ಬರಹದಲ್ಲಿ ತಿಳಿಸಲಾಗುವುದು. 

ಹಿರಿಯರ ಬಗ್ಗೆ ಇತ್ತೀಚಗಶ್ಟೇ ಗೊತ್ತಾಗಿದೆ, ಎಲ್ಲಿಂದ ತೊಡಗುವುದೆಂದು ಕೇಳ್ವಿ ಮೂಡುವುದು ಸರಿ, ಅದಕ್ಕೆ ಮಾರ‍್ನುಡಿ ಇಲ್ಲಿದೆ :-

ಮೊದಲ ಹೆಜ್ಜೆಗಳಿಗೆ ಈ ಹೊತ್ತಗೆಗಳನ್ನು ಓದಬಹುದು :- 

೧. ನುಡಿಯ ಬಗೆಗೆ ನೀವೇನು ಬಲ್ಲಿರಿ ?  

೨. ಕನ್ನಡ ನುಡಿಯರಿಮೆಯ ಇಣುಕುನೋಟ

೩. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ

೪. ಮಾತಿನ ಒಳಗುಟ್ಟು

೫. ಮಾತು ಮತ್ತು ಬರಹದ ನಡುವಿನ ಗೊಂದಲ

ಮೇಲಿನ ಹೊತ್ತಗೆಗಳನ್ನು ಓದಿದ ಮೇಲೆ ಪದಕಟ್ಟಣೆಯಲ್ಲಿ ಮುಂದುವರೆಯಲು ಬಯಸಿದರೆ ಈ ಕೆಳಗಿನ ಹೊತ್ತಗೆ ಓದಬಹುದು :- 

೬. ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

ಪದಕಟ್ಟಣೆ ಜೊತೆ ಕನ್ನಡದ್ದೇ ಒರೆಗಳು ತಿಳಿದುಕೊಳ್ಳವ ಹಂಬಲವಿದ್ದರೆ ಈ ಕೆಳಗಿನ ಹೊತ್ತಗೆಗಳನ್ನು ಬಳಸಬಹುದು :-

೭. ಇಂಗ್ಲಿಶ್-ಕನ್ನಡ ಪದನೆರಕೆ

೮. ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು 

ಸೊಲ್ಲರಿಮೆ(ವ್ಯಾಕರಣ) ಕವಲಿನಲ್ಲಿ ಮುಂದುವರೆಯಲು ಬಯಸಿದರೆ ಈ ಹೊತ್ತಗೆಗಳನ್ನು ಓದಬಹುದು :- 

೬. ಕನ್ನಡ ವ್ಯಾಕರಣ ಯಾಕೆ ಬೇಕು ? 

೭. ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ

೮. ಕನ್ನಡ ಬರಹದ ಸೊಲ್ಲರಿಮೆ - ೧ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೯. ಕನ್ನಡ ಬರಹದ ಸೊಲ್ಲರಿಮೆ - ೨ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೦. ಕನ್ನಡ ಬರಹದ ಸೊಲ್ಲರಿಮೆ - ೩ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೧. ಕನ್ನಡ ಬರಹದ ಸೊಲ್ಲರಿಮೆ - ೪ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೨. ಕನ್ನಡ ಬರಹದ ಸೊಲ್ಲರಿಮೆ - ೫ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೩. ಕನ್ನಡ ಬರಹದ ಸೊಲ್ಲರಿಮೆ - ೬ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೪. ಕನ್ನಡ ಬರಹದ ಸೊಲ್ಲರಿಮೆ - ೭ ಇಲ್ಲ ಇದು ಕನ್ನಡದ್ದೇ ವ್ಯಾಕರಣ 

೧೫. ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು

ಹವ್ಯಕ ಕನ್ನಡ ಕುರಿತು ತಿಳಿದುಕೊಳ್ಳುವ ಬಯಕೆಯಿದ್ದರೆ ಈ ಕೆಳಗಿನ ಹೊತ್ತಗೆ ಓದಬಹುದು :- 

೬. ಹವ್ಯಕ ಕನ್ನಡ  

ಹಳೆಗನ್ನಡದಿಂದ ಈಗಿನ ಕನ್ನಡದ ತನಕ ನಡೆದಿರುವ ಮಾರ‍್ಪಾಟುಗಳ ಜೊತೆ ಹಳೆಗನ್ನಡ ಸೊಲ್ಲರಿಮೆ ಕುರಿತು ತಿಳಿದುಕೊಳ್ಳುವ ಹಂಬಲಕ್ಕೆ ಈ ಹೊತ್ತಗೆಗಳನ್ನು ಓದಬಹುದು :-

೬. ಕನ್ನಡ ನುಡಿ ನಡೆದು ಬಂದ ದಾರಿ

೭. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು ?

ಕನ್ನಡ ಬರಹಗಳಲ್ಲಿ ಕಾಣುವ ಬರಹದ ಗೊಂದಲಗಳು, ಪದಬಳಕೆ ಗೊಂದಲಗಳ ಕುರಿತು ಆಳವಾಗಿ ತಿಳಿದುಕೊಳ್ಳಲು ಬಯಸಿದರೆ ಈ ಹೊತ್ತಗೆ ಓದಬಹುದು :-

೬. ಕನ್ನಡ ಬರಹವನ್ನು ಸರಿಪಡಿಸೋಣ 

ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹೊತ್ತಗೆಗಳನ್ನು ಇಲ್ಲಿಂದ ಕೊಳ್ಳಬಹುದು :- https://harivubooks.com/collections/dn-shankara-bhat-kannada-books

ಬುಧವಾರ, ಅಕ್ಟೋಬರ್ 26, 2022

ಮಿಂಬಲೆಯಲ್ಲಿ ಕೆಲವು ಕನ್ನಡ ಪದನೆರಕೆಗಳು

ಈಗಾಗಲೇ ಮಿಂಬಲೆ ನಮ್ಮ ಬದುಕಿನಲ್ಲಿ ಒಂದು ದೊಡ್ಡ ಪಾಂಗಾಗಿ ಬೆಳೆದಿದೆ. ಮಿಂಬಲೆಯಲ್ಲಿ ತುಂಬಾ ತಿಳಿವು ಸಿಗುವುದು ಸರಿ, ಈಗ ಹಲವು ಕನ್ನಡ ಪದನೆರಕೆಗಳು ಕೂಡ ಇಲ್ಲಿವೆ, ಈ ಬರಹದಲ್ಲಿ ಕೆಲವು ತಿಳಿಸಲಾಗಿದೆ. 

೧. ತಿಳಿಪದ (ಅರಿಮೆ ಮತ್ತು ಚಳಕದರಿಮೆ ಪದನೆರಕೆ) :- https://tilipada.org

೨. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ ಇಂಗ್ಲಿಷ್ ನಿಘಂಟು (೪ ಸಂಪುಟಗಳು)" :-  https://dsal.uchicago.edu/dictionaries/kittel/

೩. ವಿ.ಕ್ರುಶ್ಣ ಅವರ ಅಲರ್ "Kannada → English dictionary" :- https://alar.ink

೪. ಬರಹ ನಿಗಂಟು :-  https://baraha.com/kannada/browse.php (ಕೊಂಡಿಯಲ್ಲಿ ಹಲವು ಪದನೆರಕೆ/ಗುಂಪಿನ ಕೆಲಸಗಳಿವೆ, ಎತ್ತುಗೆ "ಪದ ಪದ ಕನ್ನಡ ಪದಾನೇ" ಗುಂಪು)

೫. ವಿಕ್ಶನರಿ :-  https://kn.wiktionary.org 

೬. ಪದಕಣಜ (ಕರ್ನಾಟಕ ಆಳ್ವಿಕೆ ತಾಣ) :- https://padakanaja.karnataka.gov.in/ 

ಭಾನುವಾರ, ಫೆಬ್ರವರಿ 20, 2022

ಕನ್ನಡದ್ದೇ ಒರೆ ತಿಳಿಸುವ ಪದನೆರಕೆಗಳು

ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ. ಕನ್ನಡ ನುಡಿಯಲ್ಲಿ ಹಿಂದಿನಿಂದಲು ಹಲವು ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿದ್ದವು. ನಮ್ಮ ಮಾತಿನಲ್ಲಿ ಹೆಚ್ಚು ಕನ್ನಡದ್ದೇ ಒರೆ ಓಡಾಡುವುದು ಆದರೆ ಬರಹಗಳಲ್ಲಿ ಹಿಂದಿನಿಂದಲು ಹೆಚ್ಚೆಚ್ಚು ಎರವಲು ಒರೆ ಸೇರಿಸುವ ವಾಡಿಕೆ ಬೆಳೆದು ಬಂದಿದೆ. ಇದರಿಂದ ಕನ್ನಡ ಬರಹಗಳು ಕಬ್ಬಿಣದ ಕಡಲೆ ಆಗಿದೆ, ಅದರಲ್ಲೂ ಕನ್ನಡದಲ್ಲಿ ಕಲಿಯುವ ಮಕ್ಕಳ ಕಲಿಕೆಹೊತ್ತಗೆಯಲ್ಲಿ ಎಲ್ಲೆಮೀರಿದ ಎರವಲು ಒರೆಗಳನ್ನು ತುರುಕಿದ್ದಾರೆ. 

ಇತ್ತೀಚಗೆ ಕನ್ನಡಿಗರಲ್ಲಿ ಕನ್ನಡದ್ದೇ ಒರೆ ಸುತ್ತಲೂ ಅರಿವು ಹೆಚ್ಚಾಗುತ್ತಿದೆ. ಕನ್ನಡದ್ದೇ ಒರೆ ತಿಳಿಸುವ ಕೆಲವು ಒರೆನೆರಕೆಗಳನ್ನು ಇಲ್ಲಿ ತಿಳಿಸಲಾಗಿದೆ. ಬರಹಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸಿದಾಗ ಅದು ಹೆಚ್ಚು ಕನ್ನಡಿಗರಿಗೆ ತಲುಪುವುದು ಹಾಗು ಅದರಿಂದ ಒಳಿತು ಕೂಡ ಪಡೆಯಬಹುದು. 

ಕನ್ನಡದ್ದೇ ಒರೆ ತಿಳಿಸುವ ಒರೆನೆರಕೆ ಪಟ್ಟಿ :-  

೧. ಅಚ್ಚಗನ್ನಡ ನುಡಿಕೋಶ (ಇಲ್ಲಿಂದ ಕೊಳ್ಳಬಹುದು :- ಅಚ್ಚಗನ್ನಡ ನುಡಿಕೋಶ)


೨. ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು 


೩. ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು


೪. ದ್ರಾವಿಡಭಾಷಾ ಜ್ಞಾತಿಪದಕೋಶ (ಇಲ್ಲಿಂದ ಕೊಳ್ಳಬಹುದು :- ದ್ರಾವಿಡಭಾಷಾ ಜ್ಞಾತಿಪದಕೋಶ)


೫. ಇಂಗ್ಲಿಶ್-ಕನ್ನಡ ಪದನೆರಕೆ


ಎಲ್ಲಾ ಬಗೆಯ ಕನ್ನಡ ಬರಹಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸೋಣ.

ಶುಕ್ರವಾರ, ಫೆಬ್ರವರಿ 18, 2022

ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು)

ಕನ್ನಡ ಸಾಹಿತ್ಯ ಪರಿಶತ್ತಿನ ಹಲವು ಕೆಲಸಗಳಲ್ಲಿ ತುಂಬಾ ದೊಡ್ಡ ಕೆಲಸವೆಂದರೆ "ಕನ್ನಡ ನಿಘಂಟು". ಇದು ಎಂಟು ಕಂತುಗಳ ಕೆಲಸ, ೯೦೨೨ ಪುಟಗಳ ಪದನೆರಕೆ ಜೊತೆ ಹಲವು ಏಡುಗಳ ಕೆಲಸ. ಇದರ ಮೊದಲ ಕಂತು ೧೯೭೦ ಬಿಡುಗಡೆಯಾಗಿ ಕೊನೆಯ ಕಂತು ೧೯೯೫ ನಲ್ಲಿ ಬಿಡುಗಡೆಯಾಯಿತು. ಇದರ ಮರುವಚ್ಚು ೨೦೧೦ ನಲ್ಲಿ ನಡೆಯಿತು. 

ಈ ಪದನೆರಕೆಯಲ್ಲಿ ಯಾವುದೇ ಒರೆ ನೋಡಿದರೆ ಅದರ ಹುರುಳು ಮತ್ತು ತಿಳಿವು ನೀಡುವುದರ ಜೊತೆ ಒರೆ ಬಳಕೆಗಳು ಕೂಡ ನೀಡಲಾಗಿದೆ. ಕೊನೆಯಲ್ಲಿ ಇದು ಕನ್ನಡದ್ದೇ ಒರೆ ಆಗಿದ್ದರೆ "ದೇ" ಗುರುತು ಕಾಣುತ್ತದೆ ಇಲ್ಲದಿದ್ದರೆ ಯಾವ ನುಡಿಯಿಂದ ಬಂದ ಪದವೆಂದು ಗುರುತಿನಿಂದ ತಿಳಿಯುತ್ತದೆ. ಎತ್ತುಗೆ :- "ಸಂ" ಅಂದರೆ ಸಂಸ್ಕೃತ. ಈ ಪದನೆರಕೆ ಒಂದು ಕಂತಿನ ಹೊದಿಕೆತಿಟ್ಟ ಇಲ್ಲಿದೆ :- 



ಎಂಟು ಕಂತುಗಳಲ್ಲಿ ಹಲವು ಹಲವು ಒರೆಗಳವೆ, ಅದರಲ್ಲಿ ಕೆಲವು ಇಲ್ಲಿ ಕೆಳಗಿನ ತಿಟ್ಟಗಳಲ್ಲಿ ಕಾಣಬಹುದು :- 






ಬುಧವಾರ, ಫೆಬ್ರವರಿ 16, 2022

ಕನ್ನಡ ಒಳನುಡಿಗಳ ಕೆಲವು ಪದನೆರಕೆಗಳು

ಕನ್ನಡ ನುಡಿಯನ್ನು ಕನ್ನಡಿಗರು ಹಲವು ಬಗೆಗಳಲ್ಲಿ ಮಾತನಾಡುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋದ ಹಾಗೆ ಈ ಮಾರ‍್ಪಾಟುಗಳು ಕಾಣುತ್ತವೆ. ಕನ್ನಡದಲ್ಲಿ ಹಲವು ಒಳನುಡಿಗಳಿವೆ ಎಂದು ಹೇಳಬಹುದು. ಈ ಹಲವು ಒಳನುಡಿಗಳ ಸಲುವಾಗಿ ಕೆಲವು ಒಳನುಡಿ ಪದನೆರಕೆಗಳು ಈ ಬರಹದಲ್ಲಿ ತಿಳಿಸುತ್ತಿದ್ದೇನೆ. 

೧. ಹವ್ಯಕ-ಇಂಗ್ಲಿಶ್ ನಿಘಂಟು :-  ೧೯೮೩ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ :- 



೨. ಚಿಗಟೇರಿ ಪದಕೋಶ :- ೧೯೯೭ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ :-



೩. ಬೀದರ್ ಕನ್ನಡ ಕೋಶ :- ೨೦೧೦ ಏಡಿನಲ್ಲಿ ಬಿಡುಗಡೆಯಾದ ಪದನೆರಕೆ, ತಿಟ್ಟ ಇಲ್ಲಿದೆ :-  



೪. ಮಲೆನಾಡು ನುಡಿಕೋಶ :- ೨೦೧೪ ಏಡಿನಲ್ಲಿ ಹೊರತರಲಾಯಿತು, ತಿಟ್ಟ ಇಲ್ಲಿದೆ:-



೫. ಕುಂದಾಪ್ರ ಕನ್ನಡ ನಿಘಂಟು :- ೨೦೨೧ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ:- 


೬. ಕಾಸರಗೋಡು ಕನ್ನಡ ಪದಕೋಶ :- ೨೦೨೨ ಏಡಿನಲ್ಲಿ ಹೊರಬಂದ ಪದನೆರಕೆ, ಓದುಗೆ ತಿಟ್ಟ ಇಲ್ಲಿದೆ


ಹೀಗೆ ಕನ್ನಡ ಒಳನುಡಿಗಳ ಸಲುವಾಗಿ ಹೆಚ್ಚೆಚ್ಚು ಪದನೆರಕೆಗಳು ಹೊರಬರಲಿ, ಕನ್ನಡ ಇರುವುದೇ ಅದರ ಹಲವುತನದಲ್ಲೇ. 

ಮಂಗಳವಾರ, ಫೆಬ್ರವರಿ 15, 2022

ಮುದ್ದಣ ಪದಪ್ರಯೋಗ ಕೋಶ

ಮುದ್ದಣ (ನಂದಳಿಕೆ ಲಕ್ಶ್ಮಿನಾರಾಯಣಪ್ಪ) ಅವರು ಕೂಡ ಕನ್ನಡ ನಲ್ಬರಹಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವರ ಹಲವು ಬರಹಗಳು ಕುರಿತು ಈಗಲೂ ಹಲವು ನೆನಪುಗಳಿವೆ. ಇದರ ಜೊತೆ ಇವರ ಪದಬಳಕೆ ಕೂಡ ಗಮನ ಸೆಳೆಯುವಂತಹ ಕೆಲಸವಾಗಿತ್ತು. ಇವರ ಪದಬಳಕೆಗಳನ್ನು ಒಟ್ಟುಗೂಡಿಸಿ ಒಂದು ಹೊತ್ತಗೆ ಬಗೆಯಲ್ಲಿ ಜಿ.ವೆಂಕಟಸುಬ್ಬಯ್ಯ ಅವರು ಹಿಂದೆ ಹೊರತಂದರು. ಹೊತ್ತಗೆ ಹೆಸರೇ "ಮುದ್ದಣ ಪದಪ್ರಯೋಗ ಕೋಶ". 

ಈ ಹೊತ್ತಗೆಯಲ್ಲಿರುವ ಕೆಲವು ಕನ್ನಡದ್ದೇ ಒರೆಗಳ ಪಟ್ಟಿ ಇಲ್ಲಿದೆ :- 

ಅಱಿ(ರಿ)ಲ್ = ನಕ್ಷತ್ರ

ಎಲರ್ = ಗಾಳಿ

ಕೆನ್ನೀರ್ = ನೆತ್ತರು, ರಕ್ತ

ಗಾಳೆದೇರ್ = ವಿಮಾನ

ಗಾಳೆವಟ್ಟೆ = ಆಕಾಶ

ತೇರಾಳ್ = ಸಾರಥಿ

ನೇಸರ್ಬಳಿ = ಸೂರ್ಯವಂಶ

ಪೂಣ್ = ಪ್ರತಿಜ್ಞೆಮಾಡು

ಬರ್ದಿಲ = ದೇವತೆ

ಸೂೞ್(ಳ್) = ಸರದಿ, ಸಮಯ

ಹೊತ್ತಗೆ = ಪುಸ್ತಕ

ಮುದ್ದಣ ಅವರ ಪದಬಳಕೆ ಈಗಲೂ ನಮಗೆ ದಾರಿತೋರಿಸುತ್ತದೆ. "ಮುದ್ದಣ ಪದಪ್ರಯೋಗ ಕೋಶ" ಹೊತ್ತಗೆ ತಿಟ್ಟ ಇಲ್ಲಿದೆ :- 



ಸೋಮವಾರ, ಫೆಬ್ರವರಿ 14, 2022

ಗೋವಿಂದ ಪೈ ನಿಘಂಟು

ಕನ್ನಡ ನಲ್ಬರಹಕ್ಕೆ ಹಲವರ ಕೊಡುಗೆ ಹಿಂದಿನಿಂದಲೂ ಇದೆ, ಅದರಲ್ಲಿ ರಾಶ್ಟ್ರಕವಿ ಗೋವಿಂದ ಪಯ್ ಅವರು ಕೂಡ ಒಬ್ಬರು. ಅವರ ಬರಹಗಳು ಹಲವು ಮಂದಿ ತಲುಪಿದೆ ಹಾಗು ಹಲವರ ಮೆಚ್ಚುಗೆ ಪಡೆದಿದೆ. ಹಿರಿಯರ ಪದಬಳಕೆ ಕಡೆ ಕೂಡ ಗಮನ ನೀಡಿ ಅದರ ಸಲುವಾಗಿ ಹೊರತಂದ ಹೊತ್ತಗೆಯೇ "ಗೋವಿಂದ ಪೈ ನಿಘಂಟು". ಈ ಒಟ್ಟುಗೂಡಿಸುವ ಕೆಲಸವನ್ನು ಮಾಡಿದ್ದು ಪ್ರೊ.ಎ.ವಿ.ನಾವಡ ಅವರು. 

"ಗೋವಿಂದ ಪೈ ನಿಘಂಟು" ಹೊತ್ತಗೆಯಲ್ಲಿ ಬಳಕೆಯಾದ ಕೆಲವು ಕನ್ನಡದ್ದೇ ಒರೆಗಳು ಹೀಗಿವೆ :- 

ಇರುಳಾರೆ - ರಾತ್ರಿಯಿಡಿ

ನೇರ್ಮೆ - ನೇರ

ತಾನ್ಮೆ - ತಾನೆಂಬ ಹೆಮ್ಮೆ, ಅಹಂಕಾರ

ಎದುರುಗಾಣಿಕೆ - ಎದುರುಗೊಳ್ಳುವಿಕೆ

ಒಸರಿಹೋಗಿ - ದ್ರವಿಸು

ಹೊಗೆಮೋರೆ - ಹೊಗೆಕಾರುವ ಮುಖ

ಮಾತಾಟ - ಮಾತುಗಾರಿಕೆ

ಮುಟ್ಟು - ಉಪಕರಣ

ಕನ್ನಡಿಕೆ - ಕನ್ನಡೀಕರಣ

ತೆಂಪಡು - ನೈಋತ್ಯ

ತೆಮ್ಮೂಡು - ಅಗ್ನೇಯ

ನಮ್ಮ ಹಿರಿಯರು ಕೂಡ ಹಲವು ಕನ್ನಡದ್ದೇ ಒರೆ ಬಳಸಿದ್ದರು. "ಗೋವಿಂದ ಪೈ ನಿಘಂಟು" ಓದುಗೆ ತಿಟ್ಟ :- 


ಕೊಡವ ಕನ್ನಡ ನಿಘಂಟು

ಪದನೆರಕೆಗಳಲ್ಲಿ ಹಲವು ಬಗೆಗಳಿವೆ, ಅದರಲ್ಲಿ ಇನ್ನುಡಿ ಪದನೆರಕೆಗಳು ಕೂಡ ಒಂದು ಬಗೆ. ಇದಕ್ಕೆ ಒಂದು ಎತ್ತುಗೆ "ಕೊಡವ ಕನ್ನಡ ನಿಘಂಟು". ೧೯೮೩ ಏಡಿನಲ್ಲಿ ಹೊರಬಂದ ಈ ಪದನೆರಕೆ ಆಮೇಲೆ ೨೦೧೪ ನಲ್ಲಿ ಎರಡನೆ ಅಚ್ಚಾಗಿ ಕನ್ನಡ ಸಾಹಿತ್ಯ ಪರಿಶತ್ತಿನಿಂದ ಹೊರತರಲಾಯಿತು.

ಈ ಪದನೆರಕೆಯಲ್ಲಿ ಹಲವು ಕೊಡವ ಪದಗಳ ಜೊತೆ ಬರಹಗಾರರಾದ ಐ.ಮಾ.ಮುತ್ತಣ್ಣ ಅವರ ಕೆಲವು ನಿಲುವುಗಳು ಕೂಡ ಕಾಣಬಹದು, ಅದೇನೆಂದರೆ ಕೊಡವ ನುಡಿಗೆ ಮಹಾಪ್ರಾಣ ಬೇಡದವೆಂದು ತಿಳಿಯಾಗಿ ತಿಳಿಸಿದ್ದಾರೆ, ಅದರ ತಿಟ್ಟ ಇಲ್ಲಿದೆ :- 


"ಕೊಡವ ಕನ್ನಡ ನಿಘಂಟು" ಹೊತ್ತಗೆ ತಿಟ್ಟ ಇಲ್ಲಿದೆ (ಕೊಳ್ಳುವುದಕ್ಕೆ :- https://harivubooks.com/products/kodava-kannada-nighantu-kannada-dictionary) :- 


ಭಾನುವಾರ, ಫೆಬ್ರವರಿ 13, 2022

ಹಳಗನ್ನಡ ಶಬ್ದಾರ್ಥಕೋಶ

ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ. ಕನ್ನಡ ನುಡಿಯಲ್ಲಿ ಹಿಂದಿನಿಂದಲು ಹಲವು ಕನ್ನಡದ್ದೇ ಪದಗಳು ಬಳಕೆಯಾಗಿವೆ. ಅದರಲ್ಲಿ ಕೆಲವು ಬಳಕೆಯಿಂದ ಬಿದ್ದು ಹೋಗಿವೆ ಹಾಗು ಇನ್ನು ಕೆಲವು ಬಳಕೆಯಲ್ಲಿವೆ. ಹಿಂದೆ ಕನ್ನಡದಲ್ಲಿ ಈ ಹಲವು ಕನ್ನಡದ್ದೇ ಪದಗಳು ಬಳಕೆಯಾಗಿದ್ದವು. ಇಂತಹ ಪದಗಳನ್ನು ನಾವು "ಹಳಗನ್ನಡ ಶಬ್ದಾರ್ಥಕೋಶ" ಹೊತ್ತಗೆಯಲ್ಲಿ ನೋಡಬಹುದು. ಈ ಹೊತ್ತಗೆಯಲ್ಲಿ ದೊರೆಯುವ ಕೆಲವು ಕನ್ನಡದ್ದೇ ಒರೆಗಳ ಎತ್ತುಗೆಗಳು ಇಲ್ಲಿವೆ :- 

ಅಗುೞ್ಚು(ಳ್ಚು) - ಮುಳುಗಿಸು

ಅರ‍್ಬಿ - ಜಲಪಾತ

ಇಲ್ಲಮೆ - ಇಲ್ಲದಿರುವಿಕೆ

ಉರುಳ್ಚು - ಉರುಳಿಸು

ಒಸಗೆ - ಉತ್ಸವ

ಕಾದಲ್ಮೆ - ಪ್ರೀತಿ

ಗಾಳಿವಟ್ಟೆಗ - ದೇವತೆ

ತುೞಿ(ಳಿ)ಲ್ - ನಮಸ್ಕಾರ

ನಾಡಾಣ್ಮ - ರಾಜ

ಪೂಣ್ಕೆ - ಪ್ರತಿಗ್ನೆ

ಸಪ್ಪಳ - ಸದ್ದು

ಹೇದೆ - ಬೂತ

ಹೊತ್ತಗೆ ತಿಟ್ಟ ಇಲ್ಲಿದೆ, ಹೀಗೆ ಹಲವು ಕನ್ನಡದ್ದೇ ಪದಗಳನ್ನು ತಿಳಿದುಕೊಳ್ಳುವುದಕ್ಕೆ ಈ ಹೊತ್ತಗೆ ತುಂಬಾ ನೆರವು ನೀಡುತ್ತದೆ. ಈ ಓದುಗೆಯನ್ನು ಇಲ್ಲಿಂದ ಕೊಳ್ಳಬಹುದು :- ಹಳಗನ್ನಡ ಶಬ್ದಾರ್ಥಕೋಶ