ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ. ಕನ್ನಡ ನುಡಿಯಲ್ಲಿ ಹಿಂದಿನಿಂದಲು ಹಲವು ಕನ್ನಡದ್ದೇ ಪದಗಳು ಬಳಕೆಯಾಗಿವೆ. ಅದರಲ್ಲಿ ಕೆಲವು ಬಳಕೆಯಿಂದ ಬಿದ್ದು ಹೋಗಿವೆ ಹಾಗು ಇನ್ನು ಕೆಲವು ಬಳಕೆಯಲ್ಲಿವೆ. ಹಿಂದೆ ಕನ್ನಡದಲ್ಲಿ ಈ ಹಲವು ಕನ್ನಡದ್ದೇ ಪದಗಳು ಬಳಕೆಯಾಗಿದ್ದವು. ಇಂತಹ ಪದಗಳನ್ನು ನಾವು "ಹಳಗನ್ನಡ ಶಬ್ದಾರ್ಥಕೋಶ" ಹೊತ್ತಗೆಯಲ್ಲಿ ನೋಡಬಹುದು. ಈ ಹೊತ್ತಗೆಯಲ್ಲಿ ದೊರೆಯುವ ಕೆಲವು ಕನ್ನಡದ್ದೇ ಪದಗಳ ಎತ್ತುಗೆಗಳು ಇಲ್ಲಿವೆ :-
ಅಗುೞ್ಚು(ಳ್ಚು) - ಮುಳುಗಿಸು
ಅರ್ಬಿ - ಜಲಪಾತ
ಇಲ್ಲಮೆ - ಇಲ್ಲದಿರುವಿಕೆ
ಉರುಳ್ಚು - ಉರುಳಿಸು
ಒಸಗೆ - ಉತ್ಸವ
ಕಾದಲ್ಮೆ - ಪ್ರೀತಿ
ಗಾಳಿವಟ್ಟೆಗ - ದೇವತೆ
ತುೞಿ(ಳಿ)ಲ್ - ನಮಸ್ಕಾರ
ನಾಡಾಣ್ಮ - ರಾಜ
ಪೂಣ್ಕೆ - ಪ್ರತಿಜ್ಞೆ
ಸಪ್ಪಳ - ಸದ್ದು
ಹೇದೆ - ಭೂತ
ಹೊತ್ತಗೆ ತಿಟ್ಟ ಇಲ್ಲಿದೆ, ಹೀಗೆ ಹಲವು ಕನ್ನಡದ್ದೇ ಪದಗಳನ್ನು ತಿಳಿದುಕೊಳ್ಳುವುದಕ್ಕೆ ಈ ಹೊತ್ತಗೆ ತುಂಬಾ ನೆರವು ನೀಡುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ