ಸೋಮವಾರ, ಫೆಬ್ರವರಿ 14, 2022

ಗೋವಿಂದ ಪೈ ನಿಘಂಟು

ಕನ್ನಡ ನಲ್ಬರಹಕ್ಕೆ ಹಲವರ ಕೊಡುಗೆ ಹಿಂದಿನಿಂದಲೂ ಇದೆ, ಅದರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರು ಕೂಡ ಒಬ್ಬರು. ಅವರ ಬರಹಗಳು ಹಲವು ಮಂದಿ ತಲುಪಿದೆ ಹಾಗು ಹಲವರ ಮೆಚ್ಚುಗೆ ಪಡೆದಿದೆ. ಹಿರಿಯರ ಪದಬಳಕೆ ಕಡೆ ಕೂಡ ಗಮನ ನೀಡಿ ಅದರ ಸಲುವಾಗಿ ಹೊರತಂದ ಹೊತ್ತಗೆಯೇ "ಗೋವಿಂದ ಪೈ ನಿಘಂಟು". ಈ ಒಟ್ಟುಗೂಡಿಸುವ ಕೆಲಸವನ್ನು ಮಾಡಿದ್ದು ಪ್ರೊ.ಎ.ವಿ.ನಾವಡ ಅವರು. 

"ಗೋವಿಂದ ಪೈ ನಿಘಂಟು" ಹೊತ್ತಗೆಯಲ್ಲಿ ಬಳಕೆಯಾದ ಕೆಲವು ಕನ್ನಡದ್ದೇ ಪದಗಳು ಹೀಗಿವೆ :- 

ಇರುಳಾರೆ - ರಾತ್ರಿಯಿಡಿ

ನೇರ್ಮೆ - ನೇರ

ತಾನ್ಮೆ - ತಾನೆಂಬ ಹೆಮ್ಮೆ, ಅಹಂಕಾರ

ಎದುರುಗಾಣಿಕೆ - ಎದುರುಗೊಳ್ಳುವಿಕೆ

ಒಸರಿಹೋಗಿ - ದ್ರವಿಸು

ಹೊಗೆಮೋರೆ - ಹೊಗೆಕಾರುವ ಮುಖ

ಮಾತಾಟ - ಮಾತುಗಾರಿಕೆ

ಮುಟ್ಟು - ಉಪಕರಣ

ಕನ್ನಡಿಕೆ - ಕನ್ನಡೀಕರಣ

ತೆಂಪಡು - ನೈಋತ್ಯ

ತೆಮ್ಮೂಡು - ಅಗ್ನೇಯ

ನಮ್ಮ ಹಿರಿಯರು ಕೂಡ ಹಲವು ಕನ್ನಡದ್ದೇ ಪದ ಬಳಸಿದ್ದರು. "ಗೋವಿಂದ ಪೈ ನಿಘಂಟು" ಓದುಗೆ ತಿಟ್ಟ :- 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ