ಯಾವುದೇ ನುಡಿಯಾಗಲಿ ಅದರಲ್ಲಿ ತನ್ನದೇ ಒರೆಗಳ ಜೊತೆ ಎರವಲು ಒರೆಗಳಿರುತ್ತವೆ. ನುಡಿಗಳ ನಡುವೆ ಒರೆಗಳು ಓಡಾಡುವುದು ಯಾವಗಲು ನಡೆಯುವ ಕೆಲಸವೇ ಹೌದು. ಕನ್ನಡ ಹೆಮ್ಮರವಾಗಿ ಬೆಳೆದಿರುವ ಒಂದು ನುಡಿಯೆಂದು ಗಮನಿಸಿದಾಗ ಹಿಂದಿನಿಂದಲು ಹಲವು ಕನ್ನಡದ್ದೇ ಒರೆಗಳು ಬಳಕೆಯಲ್ಲಿತ್ತು. ಆದರೆ ಕನ್ನಡದ್ದೇ ಒರೆಗಳ ಸುತ್ತಲೂ ಹಿಂದಿನಿಂದಲು ಒಂದು ಬಗೆಯ ಕೀಳರಿಮೆ ಉಂಟು. ಇದರಿಂದ ಕೆಲವು ಕನ್ನಡದ್ದೇ ಒರೆಗಳು ಬಳಕೆಯಿಂದ ಬಿದ್ದಿವೆ ಹಾಗು ಇನ್ನು ಕೆಲವು ಒರೆಗಳ ಬಳಕೆನೆಲೆ ಕುಗ್ಗಿಸಿ ಬರಿ ಆಡುಮಾತಿನಲ್ಲಿ ಇಲ್ಲವೇ ಕೆಟ್ಟ ನೆಲೆಯಲ್ಲಿ ಬಳಕೆ ಆಗುವುದು ನಾವು ನೋಡಬಹುದು.
ಇದರ ಕುರಿತು ಎಲ್.ಗುಂಡಪ್ಪ ಅವರು ಕೂಡ "ಕನ್ನಡ ತಮಿಳು" ಅಂಕಣದಲ್ಲಿ ಹೇಳಿದ್ದಾರೆ. ಅವರ ಮಾತುಗಳು ಕೆಳಗಿನ ತಿಟ್ಟದಲ್ಲಿ ನೋಡಬಹುದು.
ಮೇಲಿನ ಮಾತುಗಳನ್ನು ಗಮನಿಸಿದರೆ ಕನ್ನಡದ್ದೇ ಒರೆಗಳ ಸುತ್ತಲೂ ಉಂಟಾಗಿರುವ ಕೀಳರಿಮೆ ಕೆಲವು ನಾಳುಗಳ ಮಾತಲ್ಲ ಆದರೆ ಹಿಂದಿನಿಂದಲು ನಡೆದುಕೊಂಡು ಬಂದಿದೆ. ಈ ಹೊತ್ತಿನಲ್ಲಿ ಇದನ್ನು ತಿಳಿದುಕೊಂಡ ಮೇಲೆ, ನಾವು ಎಲ್ಲೆಡೆ ಹೆಚ್ಚೆಚ್ಚು ಕನ್ನಡದ್ಡೇ ಒರೆ ಬಳಸೋಣ. ಎಲ್.ಗುಂಡಪ್ಪ ಅವರ ಈ ಮೇಲಿನ ಮಾತುಗಳು "ಸಂಭಾವನೆ" ಹೊತ್ತಗೆಯ "ಕನ್ನಡ ತಮಿಳು" ಅಂಕಣದಲ್ಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ