ಬುಧವಾರ, ಫೆಬ್ರವರಿ 23, 2022

ನಲ್ಬರಹದಲ್ಲಿ ಕನ್ನಡದ್ದೇ ಒರೆಗಳಿಗೆ ಒತ್ತು ನೀಡಿದ ಹೊತ್ತಗೆಗಳು

ಕನ್ನಡದ್ದೇ ಒರೆಗಳ ಕುರಿತು ಹಿಂದಿನಿಂದಲು ಹಲವು ಅನಿಸಿಕೆಗಳು ಮೂಡಿಬಂದಿವೆ. ಇದರಲ್ಲಿ ಒಂದನಿಸಿಕೆ ಏನೆಂದರೆ ಇವುಗಳನ್ನು ಬರಹಗಳಲ್ಲಿ ಬಳಸುವುದರ ಕುರಿತು. ಇದರ ಕುರಿತು ಮತನಾಡುವುದಾದರೆ ಹಿಂದಿನಿಂದಲು ಬರಹಗಾರರು ಕನ್ನಡದ್ದೇ ಒರೆ ಬಳಸಿದರು ಕೆಲವು ಬರಹಗಾರರು ಕನ್ನಡದ್ದೇ ಒರೆಗಳಿಗೆ ಒತ್ತು ನೀಡುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಇಲ್ಲಿ ಅಂತಹ ಕೆಲವು ಹೊತ್ತಗೆಗಳ ಹೆಸರುಗಳು ತಿಳಿಸಲಾಗಿದೆ. 

೧. ಕಬ್ಬಿಗಾರ ಕಾವಂ (ಆಂಡಯ್ಯ) :- ಹಿಂದೆ ಕನ್ನಡದ್ದೇ ಒರೆ ಬಳಸಿ ಒಳ್ಳೆ ಬರಹ ಮಾಡುವುದಕ್ಕೆ ಆಗುವುದಿಲ್ಲವೆಂದು ಅನಿಸಿಕೆಯಿದ್ದಾಗ ಆಂಡಯ್ಯ ಕನ್ನಡದ್ದೇ ಒರೆಗಳಿಗೆ ಒತ್ತು ನೀಡಿ ಬರೆದ ಬರಹ "ಕಬ್ಬಿಗರ ಕಾವಂ" ಇಲ್ಲ "ಕಾವನ ಗೆಲ್ಲ". ಹೊತ್ತಗೆ ತಿಟ್ಟ ಇಲ್ಲಿದೆ :- 


೨. ನಡತೆಯ ನಾಡು, ಸೊಬಗಿನ ಬಳ್ಳಿ (ಮುಳಿಯ ತಿಮ್ಮಪ್ಪಯ್ಯ) :- ಇದರಲ್ಲಿ "ನಡತೆಯ ನಾಡು" ಒಂದು ಕತೆ ಮತ್ತೊಂದು ಕಟ್ಟೊರೆ. ಇದರ ಕುರಿತು "ಮುಳಿಯ ತಿಮ್ಮಪ್ಪಯ್ಯ (ಜೀವನ ಮತ್ತು ಕಾರ್ಯ)" (ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟ ) ಹೊತ್ತಗೆಯಲ್ಲಿ ತಿಳಿಸಿದ್ದಾರೆ, ಆ ಮಾತುಗಳು ಇಲ್ಲಿ ಸೇರಿಸಲಾಗಿದೆ :-  


ನಡತೆಯ ನಾಡು ಹಾಗು ಸೊಬಗಿನ ಬಳ್ಳಿ ಬರಹಗಳು ನಮಗೆ ಮುಳಿಯ ತಿಮ್ಮಪ್ಪಯ್ಯ ಸಮಗ್ರ ಸಾಹಿತ್ಯ (ಸಂಪುಟ ೧) ಹೊತ್ತಗೆಯಲ್ಲಿ ಸಿಗುತ್ತದೆ. ಹೊತ್ತಗೆ ತಿಟ್ಟ ಇಲ್ಲಿದೆ :-


"ನಡತೆಯ ನಾಡು" ಇಂದ ಕೆಲವು ಸೊಲ್ಲುಗಳು ಇಲ್ಲಿದೆ :- 



೩. ಸಮಗ್ರ ಅಚ್ಚಗನ್ನಡ ಕಾವ್ಯ (ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು) :- "ಅಚ್ಚಗನ್ನಡ ನುಡಿಕೋಶ" ಹೊತ್ತಗೆ ಬರೆಯುವುದರ ಜೊತೆ ಕನ್ನಡದ್ದೇ ಒರೆಗಳಿಗೆ ಒತ್ತು ನೀಡಿ ಬರೆದ ಕಟ್ಟೊರೆಗಳು "ಕಾಲೂರ ಚೆಲುವೆ" ಮತ್ತು "ನುಡಿವಣಿಗಳು". ಕನ್ನಡದ್ದೇ ಒರೆಗಳನ್ನು ತುಂಬಾ ಚೆನ್ನಾಗಿ ಬಳಸಿ ಬರೆಯುವುದಕ್ಕೆ ಆಗುತ್ತದೆಂದು ಎತ್ತಿತೋರಿಸಿದ್ದಾರೆ. ಹೊತ್ತಗೆ ತಿಟ್ಟ ಇಲ್ಲಿದೆ :- 


೪. ಹೊಸಗಾಲದ ಸೂಳ್ನುಡಿಗಳು (ಬರತ್ ಕುಮಾರ್) :- ಇನ್ನು ಇತ್ತೀಚಗೆ ಬಿಡುಗಡೆಯಾದ ಹೊತ್ತಗೆ "ಹೊಸಗಾಲದ ಸೂಳ್ನುಡಿಗಳು". ಇಲ್ಲಿ ಸೂಳ್ನುಡಿ ಅಂದರೆ ವಚನ. ಕನ್ನಡದ್ದೇ ಒರೆ ಬಳಸಿ ತುಂಬಾ ಚೆನ್ನಾಗಿ ತಿಳಿವನ್ನು ತಿಳಿಸುವ ಒಂದು ದಾರಿಯೆಂದರೆ "ಸೂಳ್ನುಡಿ(ವಚನ)". ಸೂಳ್ನುಡಿಗೆ ದೊಡ್ಡ ಹಿನ್ನಡವಳಿಯಿದೆ ಆದರೆ ಈ ಹೊತ್ತಿನಲ್ಲೂ ಕನ್ನಡದ್ದೇ ಒರೆ ಬಳಸಿ ಇದರ ಹಿರಿಮೆ ಸಾರುವ ಹೊತ್ತಗೆಯೇ "ಹೊಸಗಾಲದ ಸೂಳ್ನುಡಿಗಳು". ಹೊತ್ತಗೆ ತಿಟ್ಟ ಇಲ್ಲಿದೆ :- 


ಹೀಗೆ ಎಲ್ಲ ಬಗೆಯ ಬರಹಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸೋಣ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ