ಒಳನುಡಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಒಳನುಡಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 3, 2025

ಕನ್ನಡ ಒಳನುಡಿಗಳ ಕೆಲವು ಹೊತ್ತಗೆಗಳು

ಊರಿಂದ ಊರಿಗೆ ಯಾವುದೇ ನುಡಿಯಾಗಲಿ ಆಯ ಊರುಗಳಲ್ಲಿ ಆ ನುಡಿಯನ್ನು ಮಾತನಾಡುವ ಮಂದಿ ಮಾತು ಕೇಳಿದರೆ ಕೆಲವು ಬೇರ‍್ಮೆಗಳು ಕಾಣುತ್ತವೆ. ಇದು ಹೆಚ್ಚುಕಡಿಮೆ ಎಲ್ಲ ನುಡಿಗಳಿಗು ಒಪ್ಪುವ ಮಾತು. ಕರ್ನಾಟಕದಲ್ಲಿ ಮೂವತ್ತೊಂದು ಕಂಪಣಯಿವೆ ಮತ್ತು ಊರಿಂದ ಊರಿಗೆ ಹೋದ ಹಾಗೆ ಆಯ ಊರಿನ ಕನ್ನಡ ಗಮನಿಸಿದರೆ ಬೇರ‍್ಮೆಗಳಿವೆ. ಈ ಹಲವು ಊರುಗಳಲ್ಲಿ ಮಾತನಾಡುವ ಕನ್ನಡ ನಡುವೆಯಿರುವ ಬೇರ‍್ಮೆಗಳು ಯಾವು ? ಹೋಲಿಕೆಗಳು ಯಾವು ? ಕನ್ನಡ ಒಳನುಡಿಗಳ ಸಲುವಾಗಿ ಹಿಂದೆಯೇ ಡೆಕ್ಕನ್ ಕಾಲೇಜ್ ಅವರು ಹಲವು ಹೊತ್ತಗೆಗಳನ್ನು ಹೊರತಂದಿದ್ದರು. ಹೊತ್ತಗೆಗಳ ಪಟ್ಟಿ ಹಾಗು ತಿಟ್ಟ ಇಲ್ಲಿದೆ (https://www.dcpune.ac.in/Publications.html ಕೊಂಡಿಯಲ್ಲು ಹೊತ್ತಗೆ ಪಟ್ಟಿಯಿದೆ) :- 

೧. ಗುಲ್ಬರ‍್ಗ ಕನ್ನಡ 









೨. ತಿಪಟೂರು ಕನ್ನಡ









೩. ಹಾಲಕ್ಕಿ ಕನ್ನಡ









೪. ಹವ್ಯಕ ಕನ್ನಡ 









೫. ಬಾರ್ಕೂರು ಕನ್ನಡ









೬. ನಂಜನಗೂಡ ಕನ್ನಡ









೭. ರಬಕವಿ ಕನ್ನಡ 









೮. ಕೂರ್ಗ್ ಕನ್ನಡ







ಶನಿವಾರ, ಆಗಸ್ಟ್ 19, 2023

ಕಾಸರಗೋಡು ಕನ್ನಡ ಪದಕೋಶ

ಕನ್ನಡದಲ್ಲಿ ಹಲವು ಒಳನುಡಿಗಳಿವೆ ಅಂದರೆ ಕನ್ನಡದೊಳಗೆ ಹಲವು ಕನ್ನಡಗಳಿವೆ. ಕನ್ನಡದ ಹಲವುತನ ಇರುವುದೇ ಈ ಹಲವು ಒಳನುಡಿಗಳಲ್ಲಿ. ಕನ್ನಡ ಒಳನುಡಿಗಳ ಸಲುವಾಗಿ ಹಲವು ಹೊತ್ತಗೆಗಳು ಹಿಂದಿನಿಂದಲೂ ಮೂಡಿಬಂದಿವೆ, ಇದಕ್ಕೆ ಹೊಸ ಸೇರ‍್ಪಡೆ, ಡಾ || ಎ.ಮೋಹನ ಕುಂಟಾರ್ ಅವರ "ಕಾಸರಗೋಡು ಕನ್ನಡ ಪದಕೋಶ". ಈ ಹೊತ್ತಗೆಯನ್ನು ಕನ್ನಡ ಕಲಿಕೆವೀಡು, ಹಂಪಿ ಅವರು ಹೊರತಂದಿದ್ದಾರೆ. ಹೊತ್ತಗೆ ಮುಂಬದಿ ತಿಟ್ಟ ಇಲ್ಲಿದೆ :- 



ಈ ಹೊತ್ತಗೆಯಿಂದ, ಕೆಲವು ಗಮನ ಸೆಳೆದ ಒರೆಗಳು :- 

೧. ಅಂಟುಮಣ್ಣು - ಗೋಡೆ ಕಟ್ಟಲು ಹದಬರಿಸಿದ ಮಣ್ಣು
೨. ಅಂಗಡಿಮದ್ದು :- ಅಂಗಡಿಗಳಲ್ಲಿ ಕೊಳ್ಳಲು ಸಿಗುವ ಕಚ್ಚಾ ಔಷಧಿ 
೩. ಊರುಕಟ್ಟು :- ಊರಿನ ಕಟ್ಟುಕಟ್ಟಳೆಗಳು, ಸಂಪ್ರದಾಯಗಳು
೪. ಊಳ್ಗ :- ಊಳಿಗ, ಕೆಲಸ
೫. ಎದುರೆದುರು :- ೧. ಮುಖಾಮುಖಿ ೨. ಹೆಣ್ಣು ಕೊಟ್ಟ ಮನೆಯಿಂದಲೇ ಹೆಣ್ಣು ತಂದು ಒಂದೇ ಹೊತ್ತಿಗೆ ಮಾಡಿಕೊಳ್ಳುವ ಮದುವೆ
೬. ಒಕ್ಕಲಾಗು :- ಗ್ರುಹಪ್ರವೇಶವಾಗು
೭. ಕಟ್ಟುಕಟ್ಟಳೆ :- ವಾಡಿಕೆಯಂತೆ ನಡೆಯುವ ಆಚರಣೆ
೮. ಕೇಳ್ವಿ :- ಪ್ರಶ್ನೆ
೯. ಚಪ್ಪೆ :- ಸಪ್ಪೆ
೧೦. ತೆಂಕು :- ದಕ್ಶಿಣ ದಿಕ್ಕು
೧೧. ನಂಜಾಳ :- ಹೊಟ್ಟೆಕಿಚ್ಚು ಪಡುವವ
೧೨. ಬಾಯಿಕಟ್ಟು :- ಉಪವಾಸವಿರು
೧೩. ಬೊಳ್ಳಿ :- ಬಳ್ಳಿ, ಹಗ್ಗ
೧೪. ಮಳೆಬಿಸಿಲು :- ಮಳೆ ಮತ್ತು ಬಿಸಿಲು ಒಂದೇ ಹೊತ್ತಿನಲ್ಲಿ ಬರುವುದು
೧೫. ಮೂಡಲು :- ಪೂರ್ವದಿಕ್ಕು
೧೬. ಸಳಿ :- ಚಳಿ
೧೭. ಸಿಂಬಳುಹುಳು :- ಬಸವನಹುಳು
೧೮. ಹಚ್ಚಡ :- ಹೊದಿಕೆ
೧೯. ಹಸಿಮದ್ದು :- ಹಸಿರು ಗಿಡ, ಹುಲ್ಲುಗಳನ್ನು ಬಳಸಿ ಮಾಡುವ ಮದ್ದು
೨೦. ಹುಟ್ಟುವಳಿ :- ಬೇಸಾಯದ ಆದಾಯ
೨೧. ಹೊತ್ತು :- ಸೂರ‍್ಯ


ಶನಿವಾರ, ಜೂನ್ 18, 2022

ಪದವಿನ್ಯಾಸ - ಕನ್ನಡ ಹಲತನ ಸಾರುವ ಹೊತ್ತಗೆ

ಕರ್ನಾಟಕದ ನುಡಿ ಕನ್ನಡವನ್ನೇ ತೆಗೆದುಕೊಂಡರೆ ಅದರೊಳಗೆ ಹಲವು ಕನ್ನಡಗಳಿವೆ. ಒಂದು ಊರಿನಿಂದ ಇನ್ನೊಂದು ಊರಿನ ಕನ್ನಡದಲ್ಲಿ ಹಲವು ಬೇರ‍್ಮೆಗಳನ್ನು ನಾವು ಕಾಣಬಹುದು. ಕನ್ನಡದಲ್ಲಿ ಹಲವು ಊರುಗಳಲ್ಲಿ ಹಲವು ಬಗೆಗಳಲ್ಲಿ ಕನ್ನಡವು ಬಳಕೆಯಾಗುತ್ತಿದೆ. ಕನ್ನಡದಲ್ಲಿ ಹಲವು ಒಳನುಡಿಗಳಿವೆ ಎಂದು ಹೇಳಬಹುದು. 

ಈ ಹಲವು ಒಳನುಡಿಗಳನ್ನು ಗಮನದಲ್ಲಿಟ್ಟಿಕೊಂಡು ಒಂದೇ ಪದದ ಹಲವು ಬಗೆಗಳ ಜೊತೆ ಅದೇ ಪದಕ್ಕೆ ಬೇರೆ ಊರುಗಳಲ್ಲಿ ಸಾಟಿಯಾದ ಪದಬಳಕೆ ಕುರಿತು ಬರೆದಿರುವ ಹೊತ್ತಗೆ "ಪದವಿನ್ಯಾಸ". ಇದನ್ನು ಬರೆದವರು ಡಾ || ಅಶೋಕಕುಮಾರ ರಂಜೇರೆ. ಒಕ್ಕಲುತನವನ್ನು ಗಮನದಲ್ಲಿಟ್ಟಿಕೊಂಡು ಹದಿನಯ್ದು ಪದಗಳು, ಅವುಗಳ ಹಲವು ಬಗೆಗಳು ಮತ್ತು ಸಾಟಿ ಪದಗಳ ಪಟ್ಟಿ ಇದೇ ಹೊತ್ತಗೆಯಲ್ಲಿ ನೀಡಲಾಗಿದೆ.  ಹೊತ್ತಗೆ ಹೊದಿಕೆಪುಟ ಇಲ್ಲಿದೆ :- 


ಈ ಹೊತ್ತಗೆಯಲ್ಲಿ ಒಂದೇ ಪದ ಬೇರೆ ಊರುಗಳಲ್ಲಿ ಹೇಗೆ ಬಳಕೆಯಾಗಿದೆ ಎಂದು ತಿಳಿಸುವ ಜೊತೆ ಬೇರೆ ಊರುಗಳಲ್ಲಿ ಇದೇ ಪದಕ್ಕೆ ಸಾಟಿಯಾಗಿ ಬಳಕೆಯಾಗುತ್ತಿರುವ ಪದಗಳನ್ನು ಕೂಡ ತಿಳಿಸಲಾಗಿದೆ. ಒಂದೇ ಪದ ಕರ್ನಾಟಕದ ಬೇರೆ ಬೇರೆ ಕಂಪಣಗಳಲ್ಲಿ ಹೇಗೆ ಬಳಕೆಯಲ್ಲಿದೆ ಎಂದು ನಾಡತಿಟ್ಟದ(ಮ್ಯಾಪ್) ನೆರವಿನಿಂದ ತಿಳಿಸಲಾಗಿದೆ. ಒಟ್ಟಿನಲ್ಲಿ ಕನ್ನಡದೊಳಗೆ ಹಲವು ಕನ್ನಡಗಳಿವೆ. 

ಬುಧವಾರ, ಫೆಬ್ರವರಿ 16, 2022

ಕನ್ನಡ ಒಳನುಡಿಗಳ ಕೆಲವು ಪದನೆರಕೆಗಳು

ಕನ್ನಡ ನುಡಿಯನ್ನು ಕನ್ನಡಿಗರು ಹಲವು ಬಗೆಗಳಲ್ಲಿ ಮಾತನಾಡುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋದ ಹಾಗೆ ಈ ಮಾರ‍್ಪಾಟುಗಳು ಕಾಣುತ್ತವೆ. ಕನ್ನಡದಲ್ಲಿ ಹಲವು ಒಳನುಡಿಗಳಿವೆ ಎಂದು ಹೇಳಬಹುದು. ಈ ಹಲವು ಒಳನುಡಿಗಳ ಸಲುವಾಗಿ ಕೆಲವು ಒಳನುಡಿ ಪದನೆರಕೆಗಳು ಈ ಬರಹದಲ್ಲಿ ತಿಳಿಸುತ್ತಿದ್ದೇನೆ. 

೧. ಹವ್ಯಕ-ಇಂಗ್ಲಿಶ್ ನಿಘಂಟು :-  ೧೯೮೩ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ :- 



೨. ಚಿಗಟೇರಿ ಪದಕೋಶ :- ೧೯೯೭ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ :-



೩. ಬೀದರ್ ಕನ್ನಡ ಕೋಶ :- ೨೦೧೦ ಏಡಿನಲ್ಲಿ ಬಿಡುಗಡೆಯಾದ ಪದನೆರಕೆ, ತಿಟ್ಟ ಇಲ್ಲಿದೆ :-  



೪. ಮಲೆನಾಡು ನುಡಿಕೋಶ :- ೨೦೧೪ ಏಡಿನಲ್ಲಿ ಹೊರತರಲಾಯಿತು, ತಿಟ್ಟ ಇಲ್ಲಿದೆ:-



೫. ಕುಂದಾಪ್ರ ಕನ್ನಡ ನಿಘಂಟು :- ೨೦೨೧ ಏಡಿನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ:- 


೬. ಕಾಸರಗೋಡು ಕನ್ನಡ ಪದಕೋಶ :- ೨೦೨೨ ಏಡಿನಲ್ಲಿ ಹೊರಬಂದ ಪದನೆರಕೆ, ಓದುಗೆ ತಿಟ್ಟ ಇಲ್ಲಿದೆ


ಹೀಗೆ ಕನ್ನಡ ಒಳನುಡಿಗಳ ಸಲುವಾಗಿ ಹೆಚ್ಚೆಚ್ಚು ಪದನೆರಕೆಗಳು ಹೊರಬರಲಿ, ಕನ್ನಡ ಇರುವುದೇ ಅದರ ಹಲವುತನದಲ್ಲೇ.