ಶನಿವಾರ, ಜೂನ್ 18, 2022

ಪದವಿನ್ಯಾಸ - ಕನ್ನಡ ಹಲತನ ಸಾರುವ ಹೊತ್ತಗೆ

ಕರ್ನಾಟಕದ ನುಡಿ ಕನ್ನಡವನ್ನೇ ತೆಗೆದುಕೊಂಡರೆ ಅದರೊಳಗೆ ಹಲವು ಕನ್ನಡಗಳಿವೆ. ಒಂದು ಊರಿನಿಂದ ಇನ್ನೊಂದು ಊರಿನ ಕನ್ನಡದಲ್ಲಿ ಹಲವು ಬೇರ‍್ಮೆಗಳನ್ನು ನಾವು ಕಾಣಬಹುದು. ಕನ್ನಡದಲ್ಲಿ ಹಲವು ಊರುಗಳಲ್ಲಿ ಹಲವು ಬಗೆಗಳಲ್ಲಿ ಕನ್ನಡವು ಬಳಕೆಯಾಗುತ್ತಿದೆ. ಕನ್ನಡದಲ್ಲಿ ಹಲವು ಒಳನುಡಿಗಳಿವೆ ಎಂದು ಹೇಳಬಹುದು. 

ಈ ಹಲವು ಒಳನುಡಿಗಳನ್ನು ಗಮನದಲ್ಲಿಟ್ಟಿಕೊಂಡು ಒಂದೇ ಪದದ ಹಲವು ಬಗೆಗಳ ಜೊತೆ ಅದೇ ಪದಕ್ಕೆ ಬೇರೆ ಊರುಗಳಲ್ಲಿ ಸಾಟಿಯಾದ ಪದಬಳಕೆ ಕುರಿತು ಬರೆದಿರುವ ಹೊತ್ತಗೆ "ಪದವಿನ್ಯಾಸ". ಇದನ್ನು ಬರೆದವರು ಡಾ || ಅಶೋಕಕುಮಾರ ರಂಜೇರೆ. ಒಕ್ಕಲುತನವನ್ನು ಗಮನದಲ್ಲಿಟ್ಟಿಕೊಂಡು ಹದಿನಯ್ದು ಪದಗಳು, ಅವುಗಳ ಹಲವು ಬಗೆಗಳು ಮತ್ತು ಸಾಟಿ ಪದಗಳ ಪಟ್ಟಿ ಇದೇ ಹೊತ್ತಗೆಯಲ್ಲಿ ನೀಡಲಾಗಿದೆ.  ಹೊತ್ತಗೆ ಹೊದಿಕೆಪುಟ ಇಲ್ಲಿದೆ :- 


ಈ ಹೊತ್ತಗೆಯಲ್ಲಿ ಒಂದೇ ಪದ ಬೇರೆ ಊರುಗಳಲ್ಲಿ ಹೇಗೆ ಬಳಕೆಯಾಗಿದೆ ಎಂದು ತಿಳಿಸುವ ಜೊತೆ ಬೇರೆ ಊರುಗಳಲ್ಲಿ ಇದೇ ಪದಕ್ಕೆ ಸಾಟಿಯಾಗಿ ಬಳಕೆಯಾಗುತ್ತಿರುವ ಪದಗಳನ್ನು ಕೂಡ ತಿಳಿಸಲಾಗಿದೆ. ಒಂದೇ ಪದ ಕರ್ನಾಟಕದ ಬೇರೆ ಬೇರೆ ಕಂಪಣಗಳಲ್ಲಿ ಹೇಗೆ ಬಳಕೆಯಲ್ಲಿದೆ ಎಂದು ನಾಡತಿಟ್ಟದ(ಮ್ಯಾಪ್) ನೆರವಿನಿಂದ ತಿಳಿಸಲಾಗಿದೆ. ಒಟ್ಟಿನಲ್ಲಿ ಕನ್ನಡದೊಳಗೆ ಹಲವು ಕನ್ನಡಗಳಿವೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ