ಕನ್ನಡ ನುಡಿಯಲ್ಲಿ ಹಲವು ಪದನೆರಕೆಗಳು ಹೊರಬಂದಿವೆ ಮತ್ತು ಹಲವು ಬಗೆ ಪದನೆರಕೆಗಳು ಹೊರಬಂದಿವೆ. ಕನ್ನಡ ನುಡಿಯಲ್ಲಿ ಹಿಂದಿನಿಂದಲು ಈ ಕೆಲಸ ನಡೆದುಕೊಂಡು ಬಂದಿದೆ. ಇತ್ತೀಚಗೆ ಇದೇ ಪಟ್ಟಿಗೆ ಹೊಸ ಸೇರ‍್ಪಡೆಯೆಂದರೆ ಅದು "ಕನ್ನಡ ಜಾನಪದ ನಿಘಂಟು". ಈ ಕೆಲಸವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೈಗೆ ಎತ್ತಿಕೊಂಡಿದೆ. ಈ ಪದನೆರಕೆ ಹಲವು ಕಂತುಗಳ ಪದನೆರಕೆಯಾಗಿದೆ ಎಂದು ನಾವು ಗಮನಿಸಬೇಕು. ಇಲ್ಲಿಯ ತನಕ ನಾಲ್ಕು ಕಂತುಗಳು ಬಿಡುಗಡೆಯಾಗಿದೆ. ಈ ಪದನೆರಕೆಯ ಕೆಲವು ಹೊದಿಕೆಪುಟದ ತಿಟ್ಟಗಳು ಇಲ್ಲಿದೆ :-
ಇದೊಂದು ದೊಡ್ಡ ಕೆಲಸವೇ ಸರಿ, ಜಾನಪದದಲ್ಲಿ ಬಳಕೆಯಾಗುವ ಹಲವು ಪದಗಳ ಜೊತೆ ಕರ್ನಾಟಕದ ಹಲವು ಊರುಗಳ ಕುರಿತು ತಿಳಿವು ಈ ಪದನೆರಕೆಯಲ್ಲಿ ಸಿಗುತ್ತದೆ. ಕನ್ನಡ ನುಡಿಗೆ ಒಂದು ದೊಡ್ಡ ಕೊಡುಗೆಯೆಂದು ಹೇಳಲೇ ಬೇಕು. ಪದಗಳ ಜೊತೆ ಅವುಗಳ ಬಳಕೆ ಕೂಡ ಇದೆ. ಇದರ ಜೊತೆ ಇಂಗ್ಲಿಶ್ ನುಡಿಯಲ್ಲು ಕೂಡ ತಿಳಿವು ನೀಡಲಾಗಿದೆ. ಇಲ್ಲಿಯ ತನಕ ನಾಲ್ಕು ಕಂತುಗಳು ದೊರಕಿದೆ ಮತ್ತು ಹಲವು ಕಡೆ ಬೆರಗು ಮೂಡಿಸುವ ಒರೆಗಳು ದೊರೆಯುತ್ತವೆ. ಈ ಪದನೆರಕೆಯ ಕೆಲವು ಒರೆಗಳ ತಿಟ್ಟ ಇಲ್ಲಿದೆ :-
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ