ಬುಧವಾರ, ಮಾರ್ಚ್ 16, 2022

ಚಂಪೂ ನುಡಿಗನ್ನಡಿ (ಹಳಗನ್ನಡ ಶಬ್ದಾರ್ಥಸಂಕಲನ - ಪ್ರಯೋಗಗಳೊಂದಿಗೆ)

ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ, ಇದರಲ್ಲಿ ನಾವು ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಕುರಿತು ಕೇಳಿರುತ್ತೇವೆ. ಆದರೆ ಕನ್ನಡದಲ್ಲಿ ಹಿಂದೆ ಬಳಕೆಯಾದ ಒರೆಗಳ ಕುರಿತು ತಿಳಿದುಕೊಳ್ಳಲು ನೆರವಾಗುವ ಒಂದು ಹೊತ್ತಗೆ "ಚಂಪೂ ನುಡಿಗನ್ನಡಿ". ಇದನ್ನು ಬರೆದವರು ಡಾ || ಪಿ.ವಿ.ನಾರಾಯಣ. ಈ ಹೊತ್ತಗೆಯಲ್ಲಿ ಒರೆಗಳ ಹುರುಳು ಜೊತೆ ಅವುಗಳ ಬಳಕೆ ಕೂಡ ದೊರೆಯುತ್ತದೆ. ಹೊತ್ತಗೆ ಹೊದಿಕೆಪುಟದ ತಿಟ್ಟ ಇಲ್ಲಿದೆ :- 


ಕನ್ನಡದಲ್ಲಿ ಹಿಂದಿನಿಂದಲು ಹಲವು ಬರಹಗಾರರ ಹಲವು ಬರಹಗಳ ಕೊಡುಗೆಯಿದೆ. ಚಂಪೂ ನುಡಿಗನ್ನಡಿ ಹೊತ್ತಗೆಯಲ್ಲಿ ತಿಳಿಸಿರುವ ಒರೆಬಳಕೆ ಯಾವ ಬರಹಗಳಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಯಲು ಆ ಬರಹಗಳ ಪಟ್ಟಿಯ ತಿಟ್ಟ ಇಲ್ಲಿದೆ :- 



ಈ ಹೊತ್ತಗೆಯಲ್ಲಿ ಹಲವು ಹಲವು ಕನ್ನಡ ಒರೆಗಳು ದೊರೆಯುವ ಜೊತೆಗೆ ಕೆಲವು ಒರೆಗಳನ್ನು ನೋಡಿದರೆ ಬೆರಗು ಮೂಡುತ್ತದೆ. ಎಲ್ಲ ಒರೆಗಳಿಗೆ ಹುರುಳು ಜೊತೆ ಹಿಂದೆ ಯಾವ ಬರಹದಲ್ಲಿ ಬಳಕೆಯಾಗಿತ್ತೆಂದು ತಿಳಿಸಲಾಗಿದೆ. ಬೆರಗು ಮೂಡಿಸುವ ಒಂದು ಎತ್ತುಗೆ ಎಂದರೆ ಅದು "ಕಾದಲ್" ಬೇರು ಒರೆಯಿಂದ ದೊರೆತಿರುವ "ಕಾದಲ, ಕಾದಲಳ್, ಕಾದಲಿಸು, ಕಾದಲೆ ಮತ್ತು ಕಾದಲ್ಮೆ" ಒರೆಗಳು. ಈ ಎಲ್ಲ ಒರೆಗಳ ಹುರುಳು, ಬಳಕೆ ಹೊತ್ತಗೆಯಲ್ಲಿದೆ, ಈ ಎಲ್ಲ ಒರೆಗಳು ಕನ್ನಡದ್ದೇ ! ಇದರ ತಿಟ್ಟ ಇಲ್ಲಿದೆ :- 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ