ಶನಿವಾರ, ಮಾರ್ಚ್ 5, 2022

ಕನ್ನಡದ್ದೇ ಒರೆ ಹೊತ್ತು - ಈ ಹುರುಳಿನಲ್ಲು ಬಳಸೋಣ

ಕನ್ನಡ ನುಡಿಯಲ್ಲಿ ಹಲವು ಕನ್ನಡದ್ದೇ ಒರೆಗಳಿವೆ. ಆ ಹಲವು ಕನ್ನಡದ್ದೇ ಒರೆಗಳಲ್ಲಿ "ಹೊತ್ತು" ಕೂಡ ಒಂದು. ಹಳಗನ್ನಡದಲ್ಲಿ ಇದು "ಪೊೞ್ತು(ಳ್ತು)" ಎಂದು ಬಳಕೆಯಲ್ಲಿತ್ತು ಆದರೆ ಹಳಗನ್ನಡಿಂದ ಹೊಸಗನ್ನಡಕ್ಕೆ ಬಂದರೆ ಈ ಒರೆ ಮಾರ‍್ಪಾಟಿಗೆ ಒಳಗೊಂಡು ಈಗ "ಹೊತ್ತು" ಎಂದು ಬಳಕೆಯಲ್ಲಿದೆ. ಇದು ಒಂದೆಡೆಯಾದರೆ, ಯಾವುದೇ ನುಡಿ ನೋಡಿದರು ಒಂದು ಒರೆಗೆ ಹಲವು ಹುರುಳಿರುತ್ತವೆ, ಅದು ಹೊತ್ತು ಒರೆಗೆ ಒಪ್ಪುವ ಮಾತು ಕೂಡ ಹೌದು. ಹೊತ್ತು ಒರೆಯ ಹಲವು ಹುರುಳುಗಳಲ್ಲಿ ಒಂದು ನೇಸರು ಇಲ್ಲ ಸೂರ‍್ಯ. 

ಕನ್ನಡಿಗರ ಮಾತಿನಲ್ಲು ಈಗಲೂ ನೇಸರ ಹುರುಳಿನಲ್ಲಿ ಹೊತ್ತು ಒರೆ ಬಳಕೆಯಲ್ಲಿದೆ. ಹೊತ್ತು ಮುಳುಗುವುದು ಸಲುವಾಗಿ ಕನ್ನಡಿಗರ ಮಾತಿನಲ್ಲಿ ನೇಸರು ಹುರುಳಿನಲ್ಲಿ "ಹೊತ್ತು" ಒರೆ ಬಳಕೆಯಲ್ಲಿದೆ. ಕನ್ನಡಿಗರ ಮಾತನ್ನು ಹೊರತುಪಡಿಸು ನೋಡಿದರೆ ನಲ್ಬರಹದಲ್ಲಿ "ಹೊತ್ತು" ನೇಸರು ಹುರುಳಿನಲ್ಲಿ ಬಳಕೆಯಾಗಿದೆ, ಕೆಲವು ಎತ್ತುಗೆ ಆಮೇಲೆ ನೀಡುವೆ ಆದರೆ ಎಲ್ಲ ಬಗೆಯ ಕನ್ನಡ ಬರಹಗಳಲ್ಲಿ ಹೊತ್ತು ನೇಸರು ಹುರುಳಿನಲ್ಲಿ ಬಳಕೆಯಲ್ಲಿಲ್ಲ. 

ಕನ್ನಡ ಬರಹವೆಂದರೆ ಅದರಲ್ಲಿ ಸುದ್ದಿಹಾಳೆ, ಆಡಳಿತ ಕಡತ, ಅರಿಮೆ ಬರಹ ಇಲ್ಲ ಮಕ್ಕಳ ಕಲಿಕೆ ನೋಡಿದರೆ ನೇಸರು ಹುರುಳಿನಲ್ಲಿ "ಹೊತ್ತು" ಹೆಚ್ಚು ಕಡಿಮೆ ಬಳಸುವುದೇ ಇಲ್ಲ. ಕನ್ನಡ ಬರಹಗಳಲ್ಲಿ ಕನ್ನಡದ್ದೇ ಒರೆ ಬಳಸುವ ಹಿಂಜರಿಕೆ ಹಿಂದಿನಿಂದಲು ಬೆಳೆದು ಬಂದಿದೆ, ಕನ್ನಡದ್ದೇ ಒರೆಗಳ ಬಳಕೆನೆಲೆ ಕುಗ್ಗಿಸುವ ಕೆಲಸವೆಂದು ಹೇಳಬಹುದು. ತೊಡಕು ಗುರುತಿಸಿದ ಮೇಲೆ ಕನ್ನಡದ್ದೇ ಒರೆ ಸುತ್ತಲೂ ಬೆಳೆದಿರುವ ಈ ಕೀಳರಿಮೆಗೆ ಒಂದು ಕೊನೆ ಬೀಳಲಿ, ಎಲ್ಲ ಬಗೆಯ ಬರಹಗಳಲ್ಲಿ "ಹೊತ್ತು" ಒರೆ ನೇಸರು ಹುರುಳಿನಲ್ಲಿ ಬಳಕೆಯಾಗಲಿ. 

ಕನ್ನಡ ನಲ್ಬರಹದಲ್ಲಿ "ಹೊತ್ತು" ನೇಸರು ಹುರುಳಿನಲ್ಲಿ ಬಳಕೆಯಾಗಿದೆ ಎಂದು ಹಿಂದೆ ಹೇಳಿದ ಹಾಗೆ ಬಳಕೆಯಾಗಿರುವ ಒಂದೆರಡು ಎತ್ತುಗೆ ನೀಡುವೆ. ಡಾ || ಗೀತಾ ನಾಗಭೂಷಣ ಅವರು ತಮ್ಮ "ಸವಾಲು" ಹೆರ‍್ಕತೆಯಲ್ಲಿ ಬಳಸಿದ್ದಾರೆ. ಹೊತ್ತಗೆ ಹೊದಿಕೆಪುಟ ಜೊತೆ "ಹೊತ್ತು" ಒರೆ ಬಳಕೆಯಾಗಿರುವ ಹಾಳೆಬದಿಯ ತಿಟ್ಟ ಇಲ್ಲಿದೆ :- 




ಡಾ || ಕೆ.ಶಿವರಾಮ ಕಾರಂತರು ಕೂಡ ತಮ್ಮ "ಮರಳಿ ಮಣ್ಣಿಗೆ" ಹೆರ‍್ಕತೆಯಲ್ಲಿ "ಹೊತ್ತು" ಒರೆಯನ್ನು ನೇಸರು ಹುರುಳಿನಲ್ಲಿ ಬಳಸಿದ್ದಾರೆ. ಹೊತ್ತಗೆ ಹೊದಿಕೆಪುಟ ಹಾಗು "ಹೊತ್ತು" ಬಳಕೆಯಾದ ಹಾಳೆಬದಿ ತಿಟ್ಟ ಇಲ್ಲಿದೆ :- 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ