ಇದು ಒಂದೆಡೆಯಾದರೆ ಕನ್ನಡ ನಲ್ಬರಹದಲ್ಲಿ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ, ಹಲವು ಬರಹಗಾರರು ಕನ್ನಡದ್ದೇ ಒರೆ ಬಳಸಿದ್ದಾರೆ. ಇಲ್ಲಿ ಎರಡು ಎತ್ತುಗೆಗಳು ನೀಡಲಾಗಿವೆ.
೧. ಬೆಳುವಲದ ಮಡಿಲಲ್ಲಿ (ಹೆಚ್.ದೇವಿರಪ್ಪ) :- ಹೊತ್ತಗೆ ಹೊದಿಕೆಪುಟ ತಿಟ್ಟ ಇಲ್ಲಿದೆ
ಈ ಹೊತ್ತಗೆ ಆಯ್ದ ತುಣುಕು ಇಲ್ಲಿ ಸೇರಿಸಲಾಗಿದೆ, ಇದರಲ್ಲೇ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ. ಅವುಗಳಲ್ಲಿ "ಬೆಳುದಿಂಗಳು", "ಕದ್ದಿಂಗಳು", "ಉರುಬು", "ಒಕ್ಕಲಿಗ" ಗಮನಿಸಿ. ಇಂತಹ ಕನ್ನಡದ್ದೇ ಒರೆಗಳನ್ನು ಮತ್ತೆ ಬಳಸೋಣ, ಹಿಂಜರಿಕೆ ಬೇಡವೇ ಬೇಡ.
೨. ನಿಸರ್ಗ (ಮಿರ್ಜಿ ಅಣ್ಣಾರಾಯ) :- ಹೊತ್ತಗೆ ಹೊದಿಕೆಪುಟ ತಿಟ್ಟ ಇಲ್ಲಿದೆ
ಹೊತ್ತಗೆ ಆಯ್ದ ತುಣುಕು ಇಲ್ಲಿ ಸೇರಿಸಲಾಗಿದೆ, ಇದರಲ್ಲೇ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ. ಅವುಗಳಲ್ಲಿ "ಪಡುವಣ", "ಬಾನಂಚು", "ಇರುಳು", "ಬಯಲು", "ಮರುಕ" ಗಮಿನಿಸಿ. ಬರಿ ನಲ್ಬರಹ ಅಲ್ಲದೇ ಎಲ್ಲ ಬಗೆಯ ಬರಹಗಳಲ್ಲಿ ಇಂತಹ ಒರೆಗಳು ಬಳಕೆಯಾಗಲಿ. ಕನ್ನಡದ್ದೇ ಇರುಳು ಇರುಳಾಗುವುದು ಬೇಡ !!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ