ಸೊಡರು - ಕನ್ನಡದ್ದೇ ತಾಣ
ಗುರುವಾರ, ಜುಲೈ 25, 2024
ಕನ್ನಡದ್ದೇ ಬೇರು ಪದಗಳ ಹೊತ್ತಗೆ
ಮಂಗಳವಾರ, ಜುಲೈ 9, 2024
ಕಾದಲ್, ತಕ್ಕಾಳಿ ಕನ್ನಡದ್ದೇ ಒರೆಗಳು
ಇನ್ನೂ ಕಾದಲ್ ಒರೆಗೆ ಬರೋಣ, ಇದರ ಹುರುಳು ಒಲವು, ಪ್ರೀತಿ. ಇದು ಕೂಡ ಕನ್ನಡ ಸಾಹಿತ್ಯ ಪರಿಶತ್ತಿನ "ಕನ್ನಡ ನಿಘಂಟು" (ಎರಡನೆ ಕಂತು) ಹೊತ್ತಗೆಯಲ್ಲಿ ಹುರುಳು ಮತ್ತು ಬಳಕೆ ಜೊತೆಗಿದೆ, ಇದರ ತಿಟ್ಟ ಇಲ್ಲಿದೆ :-
ಗುರುವಾರ, ಮೇ 16, 2024
ಹಳಗನ್ನಡ ಅರ್ಥಕೋಶ
ಕನ್ನಡ ನುಡಿಯ ಹಿನ್ನಡವಳಿಯಲ್ಲಿ ಹಲವು ಹಲವು ಕನ್ನಡದ್ದೇ ಒರೆಗಳು ದೊರೆಯುತ್ತವೆ. ಈ ಹೊತ್ತಿನಲ್ಲಿ ಕೆಲವು ಬಳಕೆಯಿಂದ ಬಿದ್ದು ಹೋಗಿರಬಹುದು. ಇಂತಹ ಹೊತ್ತಗೆಗಳ ನೆರವಿನಿಂದ ಅವುಗಳ ಕುರಿತು ತಿಳಿದುಕೊಳ್ಳಬಹುದು.
ಹಳಗನ್ನಡ ಅರ್ಥಕೋಶ ಹೊತ್ತಗೆಯಿಂದ ಕೆಲವು ಕನ್ನಡದ್ದೇ ಒರೆಗಳ ಪಟ್ಟಿಯಿಲ್ಲಿದೆ :-
೧. ಅಟ್ಟಟ್ಟಿ - ದೂತ, ಓಲೆಕಾರ
೨. ಅಡಕಿಲ್ - ರಾಶಿ
೩. ಅಱಿ(ರಿ)ಲ್ - ನಕ್ಷತ್ರ
೪. ಅರ್ಬಿ - ಜಲಪಾತ
೫. ಅಲ್ಲರ - ವಿರಹ
೬. ಆಗಡು - ಆ ಸಮಯ
೭. ಆಱ(ರ)ಡಿ - ಲೂಟಿ, ದುಂಬಿ
೮. ಇಂಬು - ಆಶ್ರಯ, ಅವಕಾಶ
೯. ಈರಯ್ದು - ಹತ್ತು
೧೦. ಉಕ್ಕೆವ - ಮೋಸ
೧೧. ಉಬ್ಬುಗೊಬ್ಬು - ಅಧಿಕ ಗರ್ವ
೧೨. ಎಕ್ಕಸಕ್ಕ - ಅಸಂಬದ್ಧ ಮಾತು
೧೩. ಎಣೆ - ಸಾಟಿ, ಸಮ
೧೩. ಎಸಕ - ಕೆಲಸ, ವ್ಯವಹಾರ
೧೪. ಒಣರ್ - ಭಾವಿಸು
೧೫. ಕಡುಪಗಲ್ - ಮಧ್ಯಾಹ್ನ
೧೬. ಕಾದಲ್ - ಪ್ರೀತಿ
೧೭. ಕಿಸುವೊನ್ - ತಾಮ್ರ
೧೮. ಗೆಲ್ಲವೆಣ್ - ಜಯಲಕ್ಷ್ಮೀ
೧೯. ಚೆಂಬಿಸಿಲ - ನೇಸರ
೨೦. ಜಾಡು - ಗುರುತು, ಸುಳಿವು
೨೧. ಜೇನುಣಿ - ಜೇನು ನೊಣ
೨೨. ತುೞಿ(ಳಿ)ಲ್ - ನಮಸ್ಕಾರ
೨೩. ತೊರಳೆ - ಗುಲ್ಮ, spleen
೨೪. ದೂಸರ್ - ಕಾರಣ
೨೫. ನೋಂಪಿ - ವ್ರತ
೨೬. ಪೊೞ್ತು(ಳ್ತು) - ಹೊತ್ತು
೨೭. ಪೊೞ(ಳ)ಲ್ - ನಗರ, ಪ್ರತಿಧ್ವನಿ
೨೮. ಪೊೞೆ(ಳೆ) - ಹೊಳೆ, ನದಿ
೨೯. ಪೂಣ್ಕೆ - ಶಪಥ
೩೦. ಬಯ್ಗು - ಸಂಜೆ
೩೧. ಬಿದ್ದಿನ - ಅತಿಥಿ
೩೨. ಬೆಳಕಂಡಿ - ಕಿಟಿಕಿ
೩೩. ಮುನ್ನೀರ್ - ಸಮುದ್ರ
೩೪. ಮೇಲ್ಮೆ - ಘನತೆ
೩೫. ಸೊಡರು - ದೀಪ
೩೬. ಹೊರಜೆ - ಹಗ್ಗ
ಮಂಗಳವಾರ, ಮಾರ್ಚ್ 19, 2024
ಕನ್ನಡ ಪದಕಟ್ಟಣೆ - ಪಾಲ್ಗೊಳ್ಳುವಿಕೆ ಕುರಿತು
ಯಾವುದೇ ನುಡಿಯಾಗಲಿ ಅದಕ್ಕೆ ಪದಗಳೇ ತಿರುಳು. ಹೊಸ ಬೆಳವಣಿಗೆಗಳು, ಹೊಸದು ಕಂಡುಕೊಂಡಾಗ ಇಲ್ಲ ಕಂಡುಹಿಡಿದಾಗ ಆಗ ಅಲ್ಲಿ ಹೊಸ ಪದಗಳನ್ನು ಹಿಂದಿನಿಂದಲೂ ಕಟ್ಟುತ್ತಾ ಬಂದಿರುವುದು ನಾವು ನೋಡಿದ್ದೇವೆ. ಪದಕಟ್ಟಣೆ ನಿಲ್ಲದ ಕೆಲಸ, ಕನ್ನಡದಲ್ಲು ನಡೆದುಕೊಂಡು ಬಂದಿದೆ. ಕನ್ನಡ ಪದಕಟ್ಟಣೆಯಲ್ಲಿ ಎಲ್ಲ ಕನ್ನಡಿಗರು ಪಾಲ್ಗೊಳ್ಳಬಹುದು, ಅದರ ಸುತ್ತಲೂ ಕೆಲವು ಮಾತುಗಳು ಈ ಬರಹದಲ್ಲಿ.
ಮೊದಲನೆ ಹೆಜ್ಜೆ ಏನೆಂದರೆ ಕನ್ನಡ ಪದಕಟ್ಟಣೆಗೆ ನಾನು ಬಳಸುತ್ತಿರುವ ಪದ ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳುವುದಕ್ಕೆ ಈ ಕೆಳಗಿನ ಹೊತ್ತಗೆಗಳು ನೆರವು ನೀಡುತ್ತವೆ:-
೧. ಅಚ್ಚಗನ್ನಡ ನುಡಿಕೋಶ (ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು)
ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಒರೆಗಳು. ಈ ಹೊತ್ತಗೆಯನ್ನು https://harivubooks.com/products/acchagannadada-nudikosha ಇಂದ ಕೊಳ್ಳಬಹುದು ಇಲ್ಲ ಯಾವಾಗಲೂ ನನ್ನ ಚೂಟಿಯುಲಿಯಲ್ಲಿ (Smart Phone) ನೋಡುವ ಬಯಕೆಯಿದ್ದರೆ https://mylang.in/products/achchagannada-nudikosha-inr ಇಂದ ಕೊಳ್ಳಬಹುದು.
೨. ದ್ರಾವಿಡಭಾಷಾ ಜ್ಞಾತಿಪದಕೋಶ (ಕನ್ನಡ ಸಾಹಿತ್ಯ ಪರಿಷತ್ತು)
ಈ ಹೊತ್ತಗೆಯಲ್ಲಿರುವ ಎಲ್ಲ ಒರೆಗಳು ಕನ್ನಡದ್ದೇ ಜೊತೆಗೆ ದ್ರಾವಿಡ ನುಡಿಗಳಾದ ತಮಿಳು, ತೆಲುಗು, ತುಳು, ಕೊಡವ ನುಡಿ ಸಾಟಿಯೊರೆಗಳು ಕೂಡ ನೀಡಲಾಗಿದೆ. ಈ ಹೊತ್ತಗೆಯನ್ನು https://harivubooks.com/products/dravidabhaasha-jnaatipadakosha ಇಂದ ಕೊಳ್ಳಬಹುದು.
೩. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (೪ ಸಂಪುಟಗಳು)"
ಅ. ಈ ಹೊತ್ತಗೆಯು ಇಲ್ಲಿಂದ ಇಳಿಸಿಕೊಳ್ಳಬಹುದು :-
ಮೊದಲ ಕಂತು :- https://archive.org/details/kannada-dict-vol-1
ಎರಡನೆ ಕಂತು :- https://archive.org/details/Kannada_dict_Vol2
ಮೂರನೆ ಕಂತು :- https://archive.org/details/Kannada_dict_Vol3
ನಾಲ್ಕನೆ ಕಂತು :- https://archive.org/details/Kannada_dict_Vol4
ಕನ್ನಡದ್ದೇ ಒರೆ(ಪದ)ಯಾಗಿದ್ದರೆ ಅದು ದಪ್ಪವಾಗಿ ಅಚ್ಚಾಗಿರುತ್ತದೆ, ಎರವಲು ಆಗಿದ್ದರೆ ಅದು ಸಣ್ಣದಾಗಿ ಅಚ್ಚಾಗಿರುತ್ತದೆ.ಆ. ಈ ಪದನೆರಕೆ ಮಿಂಬಲೆಯಲ್ಲು ಇದೆ. ಅದರ ಕೊಂಡಿ :- https://dsal.uchicago.edu/dictionaries/kittel/
ಆದರೆ ಇಲ್ಲಿ ಹುಡುಕಿದರೆ ಯಾವುದೇ ಪದವಾದರು, ಅದು ಕನ್ನಡದ್ದೇ ಒರೆ ಎಂದು ನೇರವಾಗಿ ತಿಳಿಯುವುದಿಲ್ಲ. ತಿಳಿದುಕೊಳ್ಳಲು ಹೇಗೆ ಎಂದು ಒಂದು ಎತ್ತುಗೆ ನೀಡುವೆ, ಈಗ "ಸೊಡರು" ಒರೆ ಹುಡುಕೋಣ, ಹಲವು ದೊರೆತಗಳು ಬರುತ್ತವೆ. ಅದರಲ್ಲಿ "ಸೊಡರು" ಪದ ಎಡಗಡೆ ಬಂದಿರುವ ದೊರೆತಗಳ ಕಡೆ ಗಮನ ನೀಡೋಣ, ಈ ಎತ್ತುಗೆಯಲ್ಲಿ ಸೊಡರು ತೆಗೆದುಕೊಂಡಿರುವುದರಿಂದ ಎಡಗಡೆ ಸೊಡರು ಬಂದದಿರುವ ದೊರೆತಗಳನ್ನು ನೋಡೋಣ.
ಇದರಲ್ಲಿ "ka." ಮುಂದೆ ಇರುವುದು ಎಲ್ಲವು ಕನ್ನಡದ್ದೇ ಒರೆಗಳು ಆದರೆ ಇಂಗ್ಲಿಶ್ ಬರಿಗೆಗಳ ನೆರವಿನಿಂದ ಹುಡುಕಬೇಕು.
೫. ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು) (೮ ಸಂಪುಟಗಳು)
ಇದು ಎಂಟು ಕಂತಿನ ಪದನೆರಕೆ, ಇಲ್ಲಿ ಎಲ್ಲ ಒರೆಗಳ ಹುರುಳು, ತಿಳಿವು ಜೊತೆ ಅದು ಎಲ್ಲಿ ಬಳಕೆಯಾಗಿತ್ತೆಂದು ತಿಳಿಸುತ್ತದೆ. ಒರೆಯ ಕೊನೆಯಲ್ಲಿ ಇದು ಕನ್ನಡದ್ದೇ ಇಲ್ಲ ಎರವಲು ಎಂದು ತಿಳಿದುಕೊಳ್ಳಬಹುದು, "ದೇ" ಎಂದು ಕಂಡರೆ ಅದು ಕನ್ನಡದ್ದೇ ಒರೆ, ಒಂದು ಎತ್ತುಗೆ ಕೆಳಗಿನ ತಿಟ್ಟದಲ್ಲಿದೆ :-
ಶನಿವಾರ, ಜನವರಿ 6, 2024
ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಹೊತ್ತಗೆಗಳ ಓದು
ಕನ್ನಡ ನುಡಿಯರಿಮೆ, ಸೊಲ್ಲರಿಮೆ ಸಲುವಾಗಿ ಹಲವು ಹೊತ್ತಗೆಗಳನ್ನು ಹಿರಿಯ ನುಡಿಯರಿಗರಾದ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರು ಬರೆದಿದ್ದಾರೆ. ಅವರ ಹೊತ್ತಗೆಗಳನ್ನು ಯಾವ ಓರಣದಲ್ಲಿ ಓದಬೇಕೆಂಬ ಕೇಳ್ವಿ ಆಗಾಗ ಮೂಡುತ್ತದೆ, ಅದರ ಸಲುವಾಗಿ ಈ ಬರಹ ಬರೆಯುತ್ತಿದ್ದೇನೆ. ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹಲವು ಹೊತ್ತಗೆಗಳನ್ನು ಹಲವು ಓರಣ(ಕ್ರಮ)ಗಳಲ್ಲಿ ಓದಬಹುದು, ಅದರಲ್ಲಿ ಒಂದು ಓರಣ ಈ ಬರಹದಲ್ಲಿ ತಿಳಿಸಲಾಗುವುದು.
ಹಿರಿಯರ ಬಗ್ಗೆ ಇತ್ತೀಚಗಶ್ಟೇ ಗೊತ್ತಾಗಿದೆ, ಎಲ್ಲಿಂದ ತೊಡಗುವುದೆಂದು ಕೇಳ್ವಿ ಮೂಡುವುದು ಸರಿ.
ಮೊದಲ ಹೆಜ್ಜೆಗಳಿಗೆ ಈ ಹೊತ್ತಗೆಗಳನ್ನು ಓದಬಹುದು :-
೧. ಭಾಷೆಯ ಬಗೆಗೆ ನೀವೇನು ಬಲ್ಲಿರಿ ?
೨. ಕನ್ನಡ ನುಡಿಯರಿಮೆಯ ಇಣುಕುನೋಟ
೩. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ
೪. ಮಾತಿನ ಒಳಗುಟ್ಟು
೫. ಮಾತು ಮತ್ತು ಬರಹದ ನಡುವಿನ ಗೊಂದಲ
ಮೇಲಿನ ಹೊತ್ತಗೆಗಳನ್ನು ಓದಿದ ಮೇಲೆ ಪದಕಟ್ಟಣೆಯಲ್ಲಿ ಮುಂದುವರೆಯಲು ಬಯಸಿದರೆ ಈ ಕೆಳಗಿನ ಹೊತ್ತಗೆ ಓದಬಹುದು :-
೬. ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ
ಪದಕಟ್ಟಣೆ ಜೊತೆ ಕನ್ನಡದ್ದೇ ಪದಗಳು ತಿಳಿದುಕೊಳ್ಳವ ಹಂಬಲವಿದ್ದರೆ ಈ ಕೆಳಗಿನ ಹೊತ್ತಗೆಗಳನ್ನು ಬಳಸಬಹುದು :-
೭. ಇಂಗ್ಲಿಶ್-ಕನ್ನಡ ಪದನೆರಕೆ
೮. ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು
ಸೊಲ್ಲರಿಮೆ(ವ್ಯಾಕರಣ) ಕವಲಿನಲ್ಲಿ ಮುಂದುವರೆಯಲು ಬಯಸಿದರೆ ಈ ಹೊತ್ತಗೆಗಳನ್ನು ಓದಬಹುದು :-
೬. ಕನ್ನಡ ವ್ಯಾಕರಣ ಯಾಕೆ ಬೇಕು ?
೭. ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ
೮. ಕನ್ನಡ ಬರಹದ ಸೊಲ್ಲರಿಮೆ - ೧
೯. ಕನ್ನಡ ಬರಹದ ಸೊಲ್ಲರಿಮೆ - ೨
೧೦. ಕನ್ನಡ ಬರಹದ ಸೊಲ್ಲರಿಮೆ - ೩
೧೧. ಕನ್ನಡ ಬರಹದ ಸೊಲ್ಲರಿಮೆ - ೪
೧೨. ಕನ್ನಡ ಬರಹದ ಸೊಲ್ಲರಿಮೆ - ೫
೧೩. ಕನ್ನಡ ಬರಹದ ಸೊಲ್ಲರಿಮೆ - ೬
೧೪. ಕನ್ನಡ ಬರಹದ ಸೊಲ್ಲರಿಮೆ - ೭
೧೫. ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು
ಹವ್ಯಕ ಕನ್ನಡ ಕುರಿತು ತಿಳಿದುಕೊಳ್ಳುವ ಬಯಕೆಯಿದ್ದರೆ ಈ ಕೆಳಗಿನ ಹೊತ್ತಗೆ ಓದಬಹುದು :-
೬. ಹವ್ಯಕ ಕನ್ನಡ
ಹಳೆಗನ್ನಡದಿಂದ ಈಗಿನ ಕನ್ನಡದ ತನಕ ನಡೆದಿರುವ ಮಾರ‍್ಪಾಟುಗಳ ಜೊತೆ ಹಳೆಗನ್ನಡ ಸೊಲ್ಲರಿಮೆ ಕುರಿತು ತಿಳಿದುಕೊಳ್ಳುವ ಹಂಬಲಕ್ಕೆ ಈ ಹೊತ್ತಗೆಗಳನ್ನು ಓದಬಹುದು :-
೬. ಕನ್ನಡ ನುಡಿ ನಡೆದು ಬಂದ ದಾರಿ
೭. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು ?
ಕನ್ನಡ ಬರಹಗಳಲ್ಲಿ ಕಾಣುವ ಬರಹದ ಗೊಂದಲಗಳು, ಪದಬಳಕೆ ಗೊಂದಲಗಳ ಕುರಿತು ಆಳವಾಗಿ ತಿಳಿದುಕೊಳ್ಳಲು ಬಯಸಿದರೆ ಈ ಹೊತ್ತಗೆ ಓದಬಹುದು :-
೬. ಕನ್ನಡ ಬರಹವನ್ನು ಸರಿಪಡಿಸೋಣ
ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಹೊತ್ತಗೆಗಳನ್ನು ಇಲ್ಲಿಂದ ಕೊಳ್ಳಬಹುದು :- https://harivubooks.com/collections/dn-shankara-bhat-kannada-books
ಶನಿವಾರ, ಸೆಪ್ಟೆಂಬರ್ 2, 2023
ತಿಂಗಳು, ಹೊತ್ತು ಜೊತೆ ಕೆಲವು ಕನ್ನಡದ್ದೇ ಒರೆಗಳು
ಚಂದ್ರ, ಸೂರ್ಯ ಒರೆಗಳು ನಮಗೆ ಚೆನ್ನಾಗಿ ಗೊತ್ತಿದೆ. ಈ ಎರಡು ಒರೆಗಳು ಸಂಸ್ಕ್ರುತದಿಂದ ಕನ್ನಡಕ್ಕೆ ಬಂದ ಒರೆಗಳು. ಹಾಗಾದರೆ ಚಂದ್ರ, ಸೂರ್ಯಗೆ ಕನ್ನಡದ್ದೇ ಒರೆಗಳು ಇವೆಯೇ ? ಎಂಬ ಕೇಳ್ವಿಗೆ ಈ ಬರಹ. ಹೌದು, ಕನ್ನಡದ್ದೇ ಒರೆಗಳಿವೆ. ಅದನ್ನೇ ಮುಂದೆ, ಈ ಬರಹದಲ್ಲಿ ತಿಳಿಸಲಾಗುವುದು.
ಮೊದಲಿಗೆ ಸೂರ್ಯಗೆ ಕೆಲವು ಕನ್ನಡದ್ದೇ ಒರೆಗಳು :-
೧. ನೇಸರು
೨. ಹೊತ್ತು (ಹಳೆಗನ್ನಡದಲ್ಲಿ ಪೊೞ್ತು(ಳ್ತು))
೩. ಬೆಂಗದಿರ
೪. ಹಗಲಾಣ್ಮ (ಹಗಲ್ + ಆಣ್ಮ)
೫. ಹಗಲೆರೆಯ (ಹಗಲ್ + ಎರೆಯ)
೬. ಬಿಸಿಗದಿರ (ಬಿಸಿ + ಕದಿರು + -ಅ)
೭. ಚೆಂಗದಿರ
೮. ಕೆಂಗದಿರ
೯. ಬಾನ್ಜೊಡರು (ಬಾನ್ + ಸೊಡರ್)
೧೦. ಹಲ್ಲಿಲಿ (ಹಲ್ಲು + -ಇಲಿ)
೧೧. ಹಗಲೊಡೆಯ (ಹಗಲ್ + ಒಡೆಯ)
ಇನ್ನೂ ಚಂದ್ರಗೆ ಕೆಲವು ಕನ್ನಡದ್ದೇ ಒರೆಗಳು :-
೧. ತಿಂಗಳ್(ಳು)
೨. ಇರುಳೆರೆಯ (ಇರುಳು + ಎರೆಯ)
೩. ಇರುಳಾಣ್ಮ (ಇರುಳು + ಆಣ್ಮ)
೪. ತಂಗದಿರ
೫. ಚಳಿಗದಿರ (ಚಳಿ + ಕದಿರ್ + -ಅ)
೬. ಕುಳಿರ್ಗದಿರ (ಕುಳಿರ್ + ಕದಿರು + -ಅ)
೭. ಬೆಳ್ಗದಿರ
೮. ಇಂಗದಿರ
ಇಲ್ಲಿ ತಿಂಗಳು ಹಾಗೂ ನೇಸರಕ್ಕೆ ಕೆಲವು ಕನ್ನಡದ್ದೇ ಒರೆಗಳು ತಿಳಿಸಲಾಗಿದೆ. ಕನ್ನಡದ್ದೇ ಒರೆಯಿಲ್ಲ ಎಂಬ ಮಾತುಗಳನ್ನು ನುಡಿಯುವ ಮುನ್ನ ಮರೆಯಬೇಡಿ, ಕನ್ನಡ ನುಡಿ ಆಳ, ಅಗಲ ನಮ್ಮನ್ನು ಬೆರಗುಗೊಳಿಸುವುದರಲ್ಲಿ ಎರಡು ಮಾತಿಲ್ಲ !!!
ಸೋಮವಾರ, ಆಗಸ್ಟ್ 28, 2023
ಕನ್ನಡದಲ್ಲಿ ಪದಕಟ್ಟಣೆ - ನೆರವು ನೀಡುವ ಕೆಲವು ಹೊತ್ತಗೆ ಪಟ್ಟಿ
ಪದ ಕಟ್ಟಣೆಗೆ ನೆರವು ನೀಡಬಲ್ಲ ಕೆಲವು ಹೊತ್ತಗೆಗಳ ಪಟ್ಟಿ:-
೧.
ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ:- https://harivubooks.com/products/kannadadalle-padagalannu-kattuva-bagge)
೨. ಇಂಗ್ಲಿಶ್-ಕನ್ನಡ ಪದನೆರಕೆ - ಡಾ || ಡಿ.ಎನ್.ಶಂಕರ್ ಬಟ್
(ಕೊಳ್ಳುವುದಕ್ಕೆ:- https://harivubooks.com/products/english-kannada-padanerake)
೩. ಕನ್ನಡ ಬರಹದ
ಸೊಲ್ಲರಿಮೆ ೧ - ಡಾ || ಡಿ.ಎನ್.ಶಂಕರ್ ಬಟ್
(ಕೊಳ್ಳುವುದಕ್ಕೆ :- https://harivubooks.com/products/kannada-barahada-sollarime-1)
೪.
ಅಚ್ಚಗನ್ನಡ ನುಡಿಕೋಶ - ವಿದ್ವಾನ್
ಕೊಳಂಬೆ ಪುಟ್ಟಣ್ಣಗೌಡ (ಕೊಳ್ಳುವುದಕ್ಕೆ:- https://harivubooks.com/products/acchagannadada-nudikosha)
೫. ದ್ರಾವಿಡಭಾಷಾ ಜ್ಞಾತಿಪದಕೋಶ - ಕನ್ನಡ ಸಾಹಿತ್ಯ ಪರಿಷತ್ತು (ಕೊಳ್ಳುವುದಕ್ಕೆ:- https://harivubooks.com/products/dravidabhaasha-jnaatipadakosha)
೬. ಕನ್ನಡ ನಿಘಂಟು
(ಎಂಟು ಸಂಪುಟಗಳು) - ಕನ್ನಡ ಸಾಹಿತ್ಯ ಪರಿಷತ್ತು
೭. ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು - ಡಾ || ಡಿ.ಎನ್.ಶಂಕರ್ ಬಟ್ (ಕೊಳ್ಳುವುದಕ್ಕೆ:- https://harivubooks.com/products/samskruta-padagalige-kannadadde-padagalu)
೮. A Dravidian
Etymological Dictionary - M B Emeneau and T Burrow (ಕೊಂಡಿ :- https://dsal.uchicago.edu/dictionaries/burrow/)
೯. ಇಂಗ್ಲಿಷ್ ಕನ್ನಡ ವೈದ್ಯ ಪದಕೋಶ - ಡಾ || ಡಿ.ಎಸ್.ಶಿವಪ್ಪ
೧೦. Enlarged Kittel’s Kannada English Dictionary (Prof.M.Mariappa Bhat) (ಕೊಂಡಿ :- https://dsal.uchicago.edu/dictionaries/kittel/)
ಕೆಲವು
ಒಳನುಡಿ ಪದನೆರಕೆಗಳ ನೆರವು ಕೂಡ ಪಡೆಯಬಹುದು, ಪಟ್ಟಿ
ಇಲ್ಲಿದೆ :-
೧. ಹವ್ಯಕ-ಇಂಗ್ಲಿಷ್ ನಿಘಂಟು - ಮರಿಯಪ್ಪ ಬಟ್
೨. ಚಿಗಟೇರಿ ಪದಕೋಶ - ಮುದೇನೂರು ಸಂಗಣ್ಣ
೩.
ಕುಂದಾಪ್ರ ಕನ್ನಡ ನಿಘಂಟು - ಪಂಜು
ಗಂಗೊಳ್ಳಿ
೪. ಮಲೆನಾಡು
ನುಡಿಕೋಶ -
ವೇಣಾಕ್ಷಿ ಎಸ್.ಡಿ
೫.
ಕಾಸರಗೋಡು ಕನ್ನಡ ಪದಕೋಶ - ಡಾ || ಎ.ಮೋಹನ್ ಕುಂಟಾರ್
೬. ಬೀದರ
ಕನ್ನಡ ಕೋಶ - ದೇಶಾಂಶ ಹುಡಗಿ
ಈ ಕೆಲವು ಹೊತ್ತಗೆಗಳು ಬರಹಗಾರರ ಪದಬಳಕೆ ಸಲುವಾಗಿ ಬರೆದಿರುವುದು, ಇವು ಕೂಡ ನೆರವಿಗೆ ಬರುತ್ತದೆ :-
೧. ಮುದ್ದಣ ಪದಪ್ರಯೋಗ ಕೋಶ -
ಜಿ.ವೆಂಕಟಸುಬ್ಬಯ್ಯ
೨. ಗೋವಿಂದ ಪೈ ನಿಘಂಟು -
ಪ್ರೊ.ಎ.ವಿ.ನಾವಡ
೩. ಬೇಂದ್ರೆಕಾವ್ಯ : ಪದನಿರುಕ್ತ -
ಡಾ || ಜಿ.ಕೃಷ್ಣಪ್ಪ
೪. ಕುವೆಂಪು ಸಾಹಿತ್ಯ ಪದವಿವರಣೆ
ಕೋಶ (ಎಂಟು ಕಂತುಗಳು) - ಕುವೆಂಪು ವಿಶ್ವವಿದ್ಯಾನಿಲಯ
ಹಳೆಗನ್ನಡದ ನೆರವು ಪಡೆಯಲು
ಬಯಸಿದರೆ, ಈ ಕೆಳಗಿನ
ಹೊತ್ತಗೆಗಳ ನೆರವು ಪಡೆಯಬಹುದು :-
೧. ಹಳಗನ್ನಡ ಶಬ್ದಾರ್ಥಕೋಶ -
ಎನ್.ಬಸವಾರಾಧ್ಯ
೨. ಹಳಗನ್ನಡ ಅರ್ಥಕೋಶ - ಐ.ಎಂ.ಕೊಟ್ರಯ್ಯ
೩. ಚಂಪೂ ನುಡಿಗನ್ನಡಿ - ಡಾ || ಪಿ.ವಿ.ನಾರಾಯಣ